Ezekiel 40:49 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೈಸಾಲೆಯು ಇಪ್ಪತ್ತು ಮೊಳ ಅಗಲ ಮತ್ತು ಹನೆಐರಡು ಮೊಳ ಉದ್ದವಾಗಿತ್ತು. ಆ ಕೈಸಾಲೆಯನ್ನು ಹತ್ತಲು ಹತ್ತು ಮೆಟ್ಟಿಲುಗಳಿದ್ದವು. ಕೈಸಾಲೆಯ ಇಕ್ಕೆಡೆಗಳಲ್ಲಿಯೂ ಗೋಡೆಗಳಿಗೆ ಸ್ತಂಭಗಳಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು. ಹತ್ತು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು.
Kannada BSI Bible 2016
ದ್ವಾರಾಂಗಣದ ಉದ್ದ ಇಪ್ಪತ್ತು ಮೊಳ ಅಗಲ ಹನ್ನೊಂದು ಮೊಳ ಮತ್ತು ಅವರು ಮೇಲಕ್ಕೆ ಹತ್ತುವ ಮೆಟ್ಟಲುಗಳಿಂದ ನನ್ನನ್ನು ಕರೆತಂದರು. ಪಡಸಾಲೆಯಲ್ಲಿ ಈ ಕಡೆ ಒಂದು, ಆ ಕಡೆ ಒಂದು; ಎರಡು ಸ್ತಂಭಗಳಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು; ಹತ್ತು ಮೆಟ್ಲುಗಳನ್ನು ಹತ್ತಿ ಅಲ್ಲಿಗೆ ಸೇರುತ್ತಿದ್ದರು; ಎರಡು ಕಡೆಯ ನಿಲವುಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು.
Kannada Bible (KNCL) BSI 2016
ದ್ವಾರಮಂಟಪದ ಉದ್ದ ಹತ್ತು ಮೀಟರ್, ಅಗಲ ಐದುವರೆ ಮೀಟರ್ ಇದ್ದವು. ಹತ್ತು ಮೆಟ್ಟಲುಗಳನ್ನು ಹತ್ತಿ ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ನಿಲವುಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದ್ವಾರಮಂಟಪದ ಅಗಲವು ಸುಮಾರು ಹನ್ನೊಂದು ಮೀಟರ್ ಮತ್ತು ಮುಂಭಾಗದಿಂದ ಹಿಂಭಾಗಕ್ಕೆ ಸುಮಾರು ಆರು ಮೀಟರ್. ಅದನ್ನು ಹತ್ತಲು ಮೆಟ್ಟಿಲುಗಳಿದ್ದವು ಮತ್ತು ಎರಡೂ ಬದಿಗಳಲ್ಲಿ ಬಾಗಿಲಿನ ಚೌಕಟ್ಟುಗಳ ಬದಿಗಳಲ್ಲಿ ಕಂಬಗಳು ಇದ್ದವು.