Ezekiel 40:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದು ಎಂಟು ಮೊಳ ಉದ್ದವಾಗಿತ್ತು. ದ್ವಾರದ ಎರಡು ಘದಿಗಳ ಗೋಡೆಯನ್ನು ಅವನು ಅಳತೆ ಮಾಡಿದನು. ಅವು ಎರಡು ಮೊಳ ಅಗಲವಿದ್ದವು. ಆಲಯಕ್ಕೆ ಎದುರಾಗಿದ್ದ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯನ್ನು ಎಂಟು ಮೊಳವೆಂದೂ; ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು. ಹೆಬ್ಬಾಗಿಲಿನ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
Kannada BSI Bible 2016
ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು; ಅದು ಎಂಟು ಮೊಳ; ನಿಲವುಕಂಬಗಳ ಅಗಲವು ಎರಡೆರಡು ಮೊಳ; ಹೆಬ್ಬಾಗಿಲ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
Kannada Bible (KNCL) BSI 2016
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು; ಅದು ನಾಲ್ಕು ಮೀಟರ್ ಇತ್ತು; ನಿಲವು ಕಂಬಗಳ ಅಗಲ ಒಂದೊಂದು ಮೀಟರ್. ಹೆಬ್ಬಾಗಿಲ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ಬಾಗಿಲಿನ ದ್ವಾರಾಂಗಣವನ್ನು ಸುಮಾರು ನಾಲ್ಕು ಮೀಟರ್ ಅದರ ಕಂಬಗಳನ್ನು ಸುಮಾರು ಒಂದು ಮೀಟರ್ ಎಂದು ಅಳೆದನು. ಹೆಬ್ಬಾಗಿಲಿನ ದ್ವಾರಮಂಟಪವು ದೇವಾಲಯಕ್ಕೆ ಎದುರಾಗಿತ್ತು.