Ezekiel 41:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಕೋಣೆಗಳ ಬಾಗಿಲುಗಳು ಜಗಲಿಯ ಕಡೆಗೆ ಮುಖಮಾಡಿದ್ದವು. ಅವಕ್ಕೆ ಒಂದು ಬಾಗಿಲು ಉತ್ತರದ ಕಡೆಯಿಂದಲೂ ಇನ್ನೊಂದು ಬಾಗಿಲು ದಕ್ಷಿಣದ ಕಡೆಯಿಂದಲೂ ಇದ್ದವು. ಆ ಎತ್ತರದ ಜಗಲಿಯು ಸುತ್ತಲೂ ಐದು ಮೊಳ ಅಗಲವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರಕ್ಕೊಂದು, ದಕ್ಷಿಣಕ್ಕೊಂದು. ಅವೆರಡೂ ಜಗಲಿಯ ಕಡೆಗಿದ್ದವು. ಆ ಜಗಲಿಗಳೂ ಎಲ್ಲಾ ಸುತ್ತಲಿನ ಅಗಲವು ಐದು ಮೊಳವಾಗಿತ್ತು.
Kannada BSI Bible 2016
ಪಾರ್ಶ್ವದ ಕೊಠಡಿಗಳ ಬಾಗಿಲುಗಳು ಬಿಡಲ್ಪಟ್ಟ ಸ್ಥಳದ ಕಡೆಗೆ ಇದ್ದವು, ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ಬಿಡಲ್ಪಟ್ಟ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಬಡಗಲಿಗೊಂದು ತೆಂಕಲಿಗೊಂದು, ಅವೆರಡೂ ಜಗಲಿಯ ಕಡೆಗಿದ್ದವು; ಆ ಜಗಲಿಯು ಎಲ್ಲಾ ಕಡೆ ಐದು ಮೊಳ ಅಗಲವಾಗಿತ್ತು.
Kannada Bible (KNCL) BSI 2016
ಆ ಎಲ್ಲ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರ ದಕ್ಷಿಣಕ್ಕೊಂದೊಂದು. ಅವೆರಡೂ ಜಗಲಿಯ ಕಡೆಗಿದ್ದವು; ಆ ಜಗಲಿ ಎಲ್ಲ ಕಡೆ ಎರಡುವರೆ ಮೀಟರ್ ಅಗಲವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಕ್ಕದ ಕೊಠಡಿಗಳ ಬಾಗಿಲುಗಳು ತೆರೆದ ಸ್ಥಳದ ಕಡೆಗೆ ಇದ್ದವು. ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ತೆರೆದ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.