Ezekiel 41:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನ್ನು ದಿಟ್ಟಿಸುತ್ತಿತ್ತು. ಇನ್ನೊಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನ್ನು ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಖರ್ಜೂರ ಮರದ ಒಂದು ಪಕ್ಕ ಮನುಷ್ಯನ ಮುಖಕ್ಕೆ ಎದುರಾಗಿಯೂ, ಇನ್ನೊಂದು ಪಕ್ಕ ಸಿಂಹದ ಮುಖಕ್ಕೆ ಎದುರಾಗಿತ್ತು. ಹೀಗೆ ದೇವಸ್ಥಾನದ ಒಳಗಿನ ಭಾಗವೆಲ್ಲಾ ಮತ್ತು ಸುತ್ತುಮುತ್ತಲೂ ಚಿತ್ರಮಯವಾಗಿತ್ತು.
Kannada BSI Bible 2016
ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಸುತ್ತಮುತ್ತಲೂ ಮಾಡಲ್ಪಟ್ಟಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಖರ್ಜೂರ ವೃಕ್ಷದ ಒಂದು ಪಕ್ಕವು ಮನುಷ್ಯ ಮುಖಕ್ಕೆ ಎದುರು, ಇನ್ನೊಂದು ಪಕ್ಕವು ಸಿಂಹಮುಖಕ್ಕೆ ಎದುರು; ದೇವಸ್ಥಾನದ ಒಳಭಾಗವೆಲ್ಲಾ ಸುತ್ತುಮುತ್ತು ಹೀಗೆ ಚಿತ್ರಮಯವಾಗಿತ್ತು.
Kannada Bible (KNCL) BSI 2016
ಖರ್ಜೂರ ವೃಕ್ಷದ ಒಂದು ಪಕ್ಕವು ಮನುಷ್ಯಮುಖಕ್ಕೆ ಎದುರು, ಇನ್ನೊಂದು ಪಕ್ಕವು ಸಿಂಹಮುಖಕ್ಕೆ ಎದುರು; ದೇವಸ್ಥಾನದ ಒಳಭಾಗವೆಲ್ಲಾ ಸುತ್ತಮುತ್ತ ಹೀಗೆ ಚಿತ್ರಮಯವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಮನುಷ್ಯನ ಮುಖವು, ಆ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಮತ್ತು ಸುತ್ತಮುತ್ತಲೂ ಚಿತ್ರಮಯವಾಗಿತ್ತು.