Ezekiel 41:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಬಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದ್ವಾರವು ಆರು ಮೊಳ ಅಗಲವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ, ಮಹಾಪರಿಶುದ್ಧ ಸ್ಥಳದ ಕಂಬಗಳನ್ನು ಅಳತೆ ಮಾಡಲು ದ್ವಾರದ ಒಂದೊಂದು ಕಂಬದ ಅಗಲ ಎರಡೆರಡು ಮೊಳಗಳೂ, ದ್ವಾರದ ಅಗಲವು ಆರು ಮೊಳಗಳೂ, ದ್ವಾರದ ಪಕ್ಕದ ಗೋಡೆಗಳ ಅಗಲವು ಏಳು ಮೊಳವೆಂದು ಅಳೆದನು.
Kannada BSI Bible 2016
ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ [ಗರ್ಭಗೃಹವನ್ನು] ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಎರಡೆರಡು ಮೊಳ, ದ್ವಾರದ ಅಗಲ ಆರು ಮೊಳ,
Kannada Bible (KNCL) BSI 2016
ಆಮೇಲೆ ಆ ಪುರುಷ ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ ಗರ್ಭಗೃಹವನ್ನು ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಒಂದೊಂದು ಮೀಟರ್, ದ್ವಾರದ ಅಗಲ ಮೂರು ಮೀಟರ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ಅವನು ಒಳಗೆ ಹೋಗಿ ಪರಿಶುದ್ಧಸ್ಥಳದ ಪ್ರವೇಶದ್ವಾರದ ಕಂಬಗಳನ್ನು ಅಳೆದನು; ಒಂದೊಂದು ಕಂಬವು ಸುಮಾರು ಒಂದು ಮೀಟರ್ ಅಗಲವಿತ್ತು. ಪ್ರವೇಶದ್ವಾರವು ಸುಮಾರು ಮೂರು ಮೀಟರ್ ಅಗಲವಾಗಿತ್ತು ಮತ್ತು ಅದರ ಎರಡೂ ಬದಿಯ ಗೋಡೆಯು ಸುಮಾರು ನಾಲ್ಕು ಮೀಟರ್ ಅಗಲವಾಗಿತ್ತು.