Ezekiel 41:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಮೇಲೆ ಆ ಮನುಷ್ಯನು ಆಲಯದ ಗೋಡೆಯನ್ನು ಅಳತೆ ಮಾಡಿದನು. ಅದು ಆರು ಮೊಳ ದಪ್ಪವಾಗಿತ್ತು. ಆಲಯದ ಸುತ್ತಲೂ ಕೋಣೆಗಳಿದ್ದವು. ಅವು ನಾಲ್ಕು ಮೊಳ ಅಗಲವಾಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ಅವನು ಅಳತೆ ಮಾಡಲು, ದೇವಸ್ಥಾನದ ಗೋಡೆಯ ಅಗಲ ಆರು ಮೊಳಗಳೂ, ದೇವಸ್ಥಾನದ ಸುತ್ತುಮುತ್ತಲೂ ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳಗಳೂ ಇದ್ದವು.
Kannada BSI Bible 2016
ಅನಂತರ ಅವನು ಆಲಯದ ಗೋಡೆಯನ್ನು ಆರು ಮೊಳವೆಂದೂ ಮನೆಯ ಸುತ್ತಲೂ ಎಲ್ಲಾ ಕಡೆಗಳಲ್ಲೂ ಇದ್ದ ಪಾರ್ಶ್ವದ ಕೊಠಡಿಗಳ ಅಗಲ ನಾಲ್ಕು ಮೊಳವೆಂದೂ ಅಳೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವನು ಅಳೆಯಲು ದೇವಸ್ಥಾನದ ಗೋಡೆಯ ಅಗಲ ಆರು ಮೊಳ, ದೇವಸ್ಥಾನದ ಸುತ್ತುಮುತ್ತಲು ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳ ಇದ್ದವು.
Kannada Bible (KNCL) BSI 2016
ಆಮೇಲೆ ಆ ಪುರುಷ ಅಳೆಯಲು ದೇವಸ್ಥಾನದ ಗೋಡೆಯ ಅಗಲ ಮೂರು ಮೀಟರ್. ದೇವಸ್ಥಾನದ ಸುತ್ತುಮುತ್ತಲು ಎಲ್ಲಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ಎರಡೆರಡು ಮೀಟರ್ ಇದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ಅವನು ಆಲಯದ ಗೋಡೆಯನ್ನು ಅಳೆದನು; ಅದು ಸುಮಾರು ಮೂರು ಮೀಟರ್ ದಪ್ಪವಾಗಿತ್ತು, ಮತ್ತು ಆಲಯದ ಸುತ್ತಲಿನ ಕೋಣೆಗಳ ಅಗಲವು ಪ್ರತಿ ಬದಿಯಲ್ಲಿ ಸುಮಾರು ಎರಡು ಮೀಟರ್ ಆಗಿತ್ತು.