Ezekiel 42:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಲಯದ ಒಳಭಾಗದ ಅಳತೆಯನ್ನು ಅವನು ತೆಗೆದುಕೊಂಡ ಬಳಿಕ ನನ್ನನ್ನು ಪೂರ್ವದ ದ್ವಾರದಿಂದ ಹೊರತಂದು ಆ ಜಾಗವನ್ನೆಲ್ಲಾ ಅಳೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಪುರುಷನು ಒಳಗಿನ ಆಲಯವನ್ನು ಅಳತೆ ಮಾಡಿದ ನಂತರ ನನ್ನನ್ನು ಪೂರ್ವದ ಹೆಬ್ಬಾಗಿಲಿನ ಮಾರ್ಗವಾಗಿ ಹೊರಗೆ ಕರೆದುಕೊಂಡು ಬಂದು, ಆಲಯದ ಸುತ್ತಲೂ ಅಳತೆ ಮಾಡಿದನು.
Kannada BSI Bible 2016
ಹೀಗೆ ಅವನು ಒಳಗಿನ ಆಲಯದ ಅಳತೆ ಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಪುರುಷನು ಒಳಗಣ ಮಂದಿರವನ್ನು ಅಳೆದುಬಿಟ್ಟ ನಂತರ ನನ್ನನ್ನು ಮೂಡಣ ಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರತಂದು ಆಲಯವನ್ನೆಲ್ಲಾ ಸುತ್ತುಮುತ್ತಲು ಅಳೆದನು.
Kannada Bible (KNCL) BSI 2016
ಆ ಪುರುಷನು ಒಳಗಿನ ಮಂದಿರವನ್ನು ಅಳೆದ ನಂತರ ನನ್ನನ್ನು ಪೂರ್ವಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರೆದುತಂದು ಆಲಯವನ್ನೆಲ್ಲಾ ಸುತ್ತುಮುತ್ತಲು ಅಳೆದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.