Ezekiel 42:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೊರಗಿನ ಪ್ರಾಕಾರಕ್ಕೆ ಸರಿಯಾಗಿ ಹೋಗಿದ್ದ ಕೋಣೆಗಳ ಸಾಲು ಐವತ್ತು ಮೊಳ ಉದ್ದವಾಗಿತ್ತು. ಆದರೆ ಆಲಯದ ಬಳಿಯಲ್ಲಿದ್ದ ಕಟ್ಟಡವು ನೂರು ಮೊಳ ಉದ್ದವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೊರಗಿನ ಅಂಗಳದ ಕಡೆಗಿರುವ ಕೋಣೆಗಳ ಸಾಲಿನ ಉದ್ದ ಐವತ್ತು ಮೊಳವು, ದೇವಸ್ಥಾನದ ಎದುರಿಗಿರುವ ಕೋಣೆಗಳ ಸಾಲಿನ ಉದ್ದ ನೂರು ಮೊಳವಾಗಿತ್ತು.
Kannada BSI Bible 2016
ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿ ದೇವಾಲಯದ ಮುಂದೆ ನೂರು ಮೊಳವಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೊರಗಣ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಐವತ್ತು ಮೊಳ, ದೇವಸ್ಥಾನದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ನೂರು ಮೊಳ.
Kannada Bible (KNCL) BSI 2016
ಹೊರಗಣ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಇಪ್ಪತ್ತೈದು ಮೀಟರ್, ದೇವಸ್ಥಾನದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಐವತ್ತು ಮೀಟರ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿಯೂ ಮತ್ತು ದೇವಾಲಯದ ಮುಂದೆ ನೂರು ಮೊಳಗಳಿದ್ದವು.