Ezekiel 43:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನರಪುತ್ರನೇ, ಇಸ್ರಾಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ಆಲಯವನ್ನು ಅವರಿಗೆ ತೋರಿಸು ಮತ್ತು ಅವರು ಅದನ್ನು ಅಳತೆ ಮಾಡಲಿ.
Kannada BSI Bible 2016
ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ಮನೆಯನ್ನು ತೋರಿಸು ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಮಾದರಿಯನ್ನು ಅಳೆಯಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನರಪುತ್ರನೇ, ಇಸ್ರಾಯೇಲ್ ವಂಶದವರು ತಮ್ಮ ಅಪರಾಧಗಳ ನಿವಿುತ್ತ ನಾಚಿಕೆಪಡುವಂತೆ ದೇವಾಲಯವನ್ನು ಅವರಿಗೆ ತೋರಿಸು; ಅವರು ಅದನ್ನು ಅಳತೆ ಮಾಡಲಿ.
Kannada Bible (KNCL) BSI 2016
“ನರಪುತ್ರನೇ, ಇಸ್ರಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ದೇವಾಲಯವನ್ನು ಅವರಿಗೆ ತೋರಿಸು; ಅವರು ಅದನ್ನು ಅಳತೆಮಾಡಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ದೇವಾಲಯನ್ನು ವಿವರಿಸಿರಿ. ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಅದರ ಪರಿಪೂರ್ಣತೆಯನ್ನು ಪರಿಗಣಿಸಲಿ.