Ezekiel 43:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಚಾದೋಕನ ಸಂತತಿಯ ಯಾಜಕರ ಪಾಪಪರಿಹಾರಕ್ಕಾಗಿ ನೀನು ಒಂದು ಎಳೆ ಹೋರಿಯನ್ನು ಅರ್ಪಿಸು. ಇವರು ಲೇವಿಕುಲದ ಯಾಜಕರು. ಇವರು ನನಗೆ ಕಾಣಿಕೆಗಳನ್ನು ಅರ್ಪಿಸುವ ಸೇವೆ ಮಾಡುವವರಾಗಿರುತ್ತಾರೆ.’“ ಇದು ನನ್ನ ಒಡೆಯನಾದ ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೇವಿಯರೂ, ಚಾದೋಕನ ಸಂತಾನದವರೂ, ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷ ಪರಿಹಾರಕಯಜ್ಞಕ್ಕಾಗಿ ಕೊಡು ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ದೇವರಾದ ಕರ್ತನು ಹೇಳುವದೇನಂದರೆ--ನನಗೆ ಸೇವೆಮಾಡುವದಕ್ಕಾಗಿ ನನ್ನ ಬಳಿಗೆ ಸವಿಾಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯವರಿಗೂ ಪಾಪದ ಬಲಿಗಾಗಿ ಎಳೇ ಹೊರಿಯನ್ನು ಕೊಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೇವಿಯರೂ ಚಾದೋಕನ ಸಂತಾನದವರೂ ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷಪರಿಹಾರಕ ಯಜ್ಞಕ್ಕಾಗಿ ಕೊಡು. ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ಲೇವಿಯರೂ, ಚಾದೋಕನ ಸಂತಾನದವರೂ ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿ ಕೊಡು. ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಬಳಿಗೆ ಸಮೀಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯರಿಗೂ ದೋಷಪರಿಹಾರ ಬಲಿಗಾಗಿ ಎಳೆಯ ಹೋರಿಯನ್ನು ಕೊಡಬೇಕು.