Ezekiel 43:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಜ್ಞವೇದಿಯನ್ನು ಶುದ್ಧೀಕರಿಸಿದ ನಂತರ ನಿಷ್ಕಳಂಕವಾದ ಒಂದು ಹೋರಿ ಮತ್ತು ಹಿಂಡಿನಿಂದ ಒಂದು ಟಗರನ್ನು ಸಮರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಯಜ್ಞವೇದಿಯ ಶುದ್ಧೀಕರಣದ ಕಾರ್ಯವನ್ನು ಮುಗಿಸಿದ ಮೇಲೆ, ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ತಂದು ಅರ್ಪಿಸಬೇಕು.
Kannada BSI Bible 2016
ಹೀಗೆ ಅವರು ಶುದ್ಧ ಮಾಡಿದಾಗ ಕೊನೆಯಲ್ಲಿ ದೋಷ ವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಯಜ್ಞವೇದಿಯ ಶುದ್ಧೀಕಾರ್ಯವನ್ನು ತೀರಿಸಿದ ಮೇಲೆ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದ ತಂದ ಪೂರ್ಣಾಂಗವಾದ ಟಗರನ್ನೂ ಅರ್ಪಿಸು.
Kannada Bible (KNCL) BSI 2016
ನೀನು ಬಲಿಪೀಠದ ಶುದ್ಧೀಕಾರ್ಯವನ್ನು ಪೂರೈಸಿದ ಮೇಲೆ ಕಳಂಕರಹಿತವಾದ ಹೋರಿಯನ್ನೂ ಹಿಂಡಿನಿಂದ ತಂದ ಕಳಂಕರಹಿತ ಟಗರನ್ನೂ ಅರ್ಪಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅವರು ಶುದ್ಧಮಾಡಿದಾಗ ಕೊನೆಯಲ್ಲಿ ದೋಷವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.