Ezekiel 43:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನ ಸನ್ನಿಧಾನದಲ್ಲಿ ಅವುಗಳನ್ನು ವಊಸಬೇಕು. ಆಮೇಲೆ ಯಾಜಕರು ಅದರ ಮೇಲೆ ಉಪ್ಪು ಚಿಮುಕಿಸಿ ಹೋರಿ ಮತ್ತು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು, ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ, ಯೆಹೋವನಿಗಾಗಿ ಸರ್ವಾಂಗಹೋಮವನ್ನು ಅರ್ಪಿಸಬೇಕು.
Kannada BSI Bible 2016
ನೀನು ಅವುಗಳನ್ನು ಕರ್ತನ ಮುಂದೆ ಅರ್ಪಿಸಬೇಕು; ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಲು ಯಾಜಕರು ಅವುಗಳ ಮೇಲೆ ಉಪ್ಪನ್ನು ಚೆಲ್ಲಿ ಯೆಹೋವನಿಗಾಗಿ ಸರ್ವಾಂಗಹೋಮ ಮಾಡಬೇಕು.
Kannada Bible (KNCL) BSI 2016
ನೀನು ಅವುಗಳನ್ನು ಸರ್ವೇಶ್ವರನಿಗೆ ಸಮರ್ಪಿಸಿದಾಗ ಯಾಜಕರು ಅವುಗಳ ಮೇಲೆ ಉಪ್ಪನ್ನು ಚೆಲ್ಲಿ, ಸರ್ವೇಶ್ವರನಿಗಾಗಿ ದಹನಬಲಿ ಒಪ್ಪಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಅವುಗಳನ್ನು ಯೆಹೋವ ದೇವರ ಮುಂದೆ ಅರ್ಪಿಸಬೇಕು. ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಬೇಕು.