Ezekiel 43:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನೋಡಿದ ದರ್ಶನವು ಕೆಬಾರ್ ಕಾಲುವೆಯ ಬಳಿ ಕಂಡ ದರ್ಶನದಂತಿತ್ತು. ನಾನು ಸಾಷ್ಟಾಂಗವೆರಗಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಕಂಡು ದರ್ಶನವೂ, ಆತನು ಪಟ್ಟಣವನ್ನು ಹಾಳುಮಾಡಲು ಬಂದಾಗ ನೋಡಿದ ದರ್ಶನದ ಹಾಗೂ, ಕೆಬಾರ್ ನದಿಯ ಹತ್ತಿರ ನನಗಾದ ದರ್ಶನದ ಹಾಗೂ ಇತ್ತು. ಆಗ ನಾನು ಬೋರಲು ಬಿದ್ದೆನು.
Kannada BSI Bible 2016
ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್‌ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೊದಲು ನನಗೆ ಕಂಡುಬಂದ ತೇಜಸ್ಸಿನಂತೆ ಅದು ಕಾಣಿಸಿತು; ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನು ಕಂಡೆನು; ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತದರ್ಶನದಂಥಾ ದರ್ಶನವು ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆನು.
Kannada Bible (KNCL) BSI 2016
ಮೊದಲು ನನಗೆ ಕಂಡುಬಂದ ತೇಜಸ್ಸಿನಂತೆ ಅದು ಕಾಣಿಸಿತು. ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದ‍ನ್ನು ಕಂಡೆನೋ ಅಂಥದನ್ನೇ ಕಂಡೆನು. ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತ ದರ್ಶನದಂಥ ದರ್ಶನ ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಕಂಡ ದರ್ಶನವು, ಅವನು ಪಟ್ಟಣವನ್ನು ನಾಶಮಾಡಲು ಬಂದಾಗ ನಾನು ನೋಡಿದ ದೃಷ್ಟಿಯಂತೆ ಮತ್ತು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ದರ್ಶನಗಳಂತೆ ಮತ್ತು ಆಗ ನಾನು ಬೋರಲು ಬಿದ್ದೆನು.