Ezekiel 44:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೆಹೋವನು ನನಗೆ ಹೀಗೆಂದನು, “ಈ ದ್ವಾರವು ಮುಚ್ಚಿಯೇ ಇರಬೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದ್ವಾರದ ಮೂಲಕ ಪ್ರವೇಶಿಸಿದ್ದನು. ಆದ್ದರಿಂದ ಇದು ಮುಚ್ಚಿಯೇ ಇರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೋವನು ನನಗೆ, “ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದನ್ನು ತೆರೆಯಬಾರದು, ಇದರಿಂದ ಯಾರೂ ಪ್ರವೇಶಿಸಬಾರದು. ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನೆ. ಆದುದರಿಂದ ಇದು ಮುಚ್ಚಿರಬೇಕು.
Kannada BSI Bible 2016
ಆಮೇಲೆ ಕರ್ತನು ನನಗೆ ಹೇಳಿದ್ದೇನಂದರೆ--ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದು ತೆರೆಯಬಾರದು; ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು; ಇಸ್ರಾಯೇಲ್ಯರ ದೇವರಾದ ಕರ್ತನು ಇದರಿಂದ ಪ್ರವೇಶಿಸಿದ್ದಾನೆ. ಆದದರಿಂದ ಇದು ಮುಚ್ಚಲ್ಪಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೆಹೋವನು ನನಗೆ - ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನಲ್ಲಾ; ಇದು ಮುಚ್ಚೇ ಇರಬೇಕು.
Kannada Bible (KNCL) BSI 2016
ಆಗ ಸರ್ವೇಶ್ವರ ನನಗೆ, “ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಯೇಲಿನ ದೇವರಾದ ಸರ್ವೇಶ್ವರ ಇದರಿಂದ ಪ್ರವೇಶಿಸಿದ್ದಾರೆ; ಇದು ಮುಚ್ಚೇ ಇರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಬಾಗಿಲು ಮುಚ್ಚೇ ಇರಬೇಕು. ಇದು ತೆರೆಯಬಾರದು. ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು. ಏಕೆಂದರೆ ಇಸ್ರಾಯೇಲರ ಯೆಹೋವ ದೇವರು ಇದರಿಂದ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ಮುಚ್ಚಿರಬೇಕು.