Ezekiel 44:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಊಶರಾಗಿ ಯಾಜಕರು ಸೇವೆಮಾಡಙೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಙೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಊನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವ್ಯಾಜ್ಯವಾಡುವಾಗ ಅವರ ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಬೇಕು. ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.
Kannada BSI Bible 2016
ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ವ್ಯಾಜ್ಯವಾಗುವಲ್ಲಿ ಅದನ್ನು ತೀರಿಸಲು ನಿಂತು ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳು ಆಚರಿಸಲ್ಪಡುವಂತೆ ನೋಡಿಕೊಳ್ಳಲಿ.
Kannada Bible (KNCL) BSI 2016
ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್‍ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು.