Ezekiel 44:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸತ್ತ ಹೆಣದ ಬಳಿಗೆ ಹೋಗಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಙೇಕಾಗುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಸತ್ತವರ ಹೆಣವನ್ನು ಸಮೀಪಿಸಿ, ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗೋಸ್ಕರ ಒಬ್ಬನು ತನ್ನನ್ನು ಅಪವಿತ್ರ ಮಾಡಿಕೊಳ್ಳಬಹುದು.
Kannada BSI Bible 2016
ಅವರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆ ತಾಯಿ, ಮಗ, ಮಗಳು, ಸಹೋದರ, ಮತ್ತು ಗಂಡ ಇಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸತ್ತವರ ಹೆಣವನ್ನು ಸಮೀಪಿಸಿ ತಮ್ಮನ್ನು ಅಪವಿತ್ರಮಾಡಿಕೊಳ್ಳಬಾರದು; ಆದರೆ [ಸತ್ತ] ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗೋಸ್ಕರ ಒಬ್ಬನು ತನ್ನನ್ನು ಅಪವಿತ್ರಮಾಡಿಕೊಳ್ಳಬಹುದು;
Kannada Bible (KNCL) BSI 2016
“ಸತ್ತವರ ಹೆಣವನ್ನು ಸಮೀಪಿಸಿ ತಮ್ಮನ್ನೇ ಅಶುದ್ಧಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗಾಗಿ ಒಬ್ಬನು ತನ್ನನ್ನೇ ಅಶುದ್ಧಮಾಡಿಕೊಳ್ಳಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಯಾಜಕರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆತಾಯಿ, ಮಗ, ಮಗಳು, ಸಹೋದರ, ಗಂಡನಿಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.