Ezekiel 44:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜನರ ಅಊಪತಿಯು ಯೆಹೋವನ ಸನ್ನಿಊಯಲ್ಲಿ ಊಟಮಾಡಲು ಬರುವಾಗ ಅವನು ಮಾತ್ರ ಈ ದ್ವಾರದ ಬಳಿ ಕುಳಿತುಕೊಳ್ಳಘಹುದು. ಅಊಪತಿಯು ದ್ವಾರದ ಮಂಟಪದ ಮೂಲಕ ಪ್ರವೇಶಿಸಬೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಬರಬೇಕು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲಿನ ಪ್ರಭುವೋ ಯೆಹೋವನ ಸನ್ನಿಧಿಯಲ್ಲಿ ಊಟ ಮಾಡುವುದಕ್ಕಾಗಿ ಇಲ್ಲಿ ಕುಳಿತುಕೊಳ್ಳಬಹುದು. ಅವನು ಹೆಬ್ಬಾಗಿಲ ಪಡಸಾಲೆಯ ಮಾರ್ಗವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು” ಎಂದು ಹೇಳಿದನು.
Kannada BSI Bible 2016
ಇದು ಪ್ರಭುವಿಗಾಗಿದೆ; ಪ್ರಭುವು ಅದರೊಳಗೆ ಕುಳಿತುಕೊಂಡು, ಕರ್ತನ ಮುಂದೆ ರೊಟ್ಟಿಯನ್ನು ತಿನ್ನಬೇಕು; ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗ ವಾಗಿ ಹೊರಗೆ ಹೋಗಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರಭುವೋ ಯೆಹೋವನ ಸನ್ನಿಧಿಯಲ್ಲಿ ಹವಿರ್ಭೋಜನಮಾಡುವದಕ್ಕೆ ಇಲ್ಲಿ ಪ್ರಭುವಾಗಿ ಕೂತುಕೊಳ್ಳಬಹುದು; ಅವನು ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಸೇರಿ ಅದೇ ಮಾರ್ಗವಾಗಿ ಹೊರಡಬೇಕು ಎಂದು ಹೇಳಿದನು.
Kannada Bible (KNCL) BSI 2016
ರಾಜರು ಸರ್ವೇಶ್ವರನ ಸನ್ನಿಧಿಯಲ್ಲಿ ಹವಿರ್ಭೋಜನ ಮಾಡುವುದಕ್ಕೆ ಇಲ್ಲಿ ಕುಳಿತುಕೊಳ್ಳಬಹುದು; ಅವನು ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಬಂದು ಅದೇ ಮಾರ್ಗವಾಗಿ ಹೊರಡಬೇಕು,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದು ಪ್ರಭುವಿಗಾಗಿ ಇದೆ; ಪ್ರಭುವು ಅವರೊಳಗೆ ಕುಳಿತುಕೊಂಡು, ಯೆಹೋವ ದೇವರ ಮುಂದೆ ರೊಟ್ಟಿಯನ್ನು ತಿನ್ನಬೇಕು. ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.”