Ezekiel 45:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪಾಪಪರಿಹಾರಕಯಜ್ಞಕ್ಕೆ ಘಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸಬಲ್ಪವನ್ನು ತೆಗೆದುಕೊಂಡು ಅದನ್ನು ಆಲಯದ ಬಾಗಿಲಿನ ನಿಲುವು ಕಂಘಗಳಿಗೂ, ಯಜ್ಞವೇದಿಕೆಯ ಸಜ್ಜದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದ್ವಾರದ ಎರಡು ನಿಲುವು ಕಂಘಗಳಿಗೂ ಹಚ್ಚಙೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯಾಜಕನು ಆ ದೋಷಪರಿಹಾರಕ ಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ, ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಹೆಬ್ಬಾಗಿಲಿನ ಕಂಬಗಳಿಗೂ ಹಚ್ಚಬೇಕು.
Kannada BSI Bible 2016
ಯಾಜಕನು ಪಾಪಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆ ಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯಾಜಕನು ಆ ದೋಷಪರಿಹಾರಕಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಣ ಪ್ರಾಕಾರದ ಹೆಬ್ಬಾಗಿಲ ನಿಲವುಕಂಬಗಳಿಗೂ ಹಚ್ಚಬೇಕು.
Kannada Bible (KNCL) BSI 2016
ಆಗ ಯಾಜಕನು ಆ ದೋಷಪರಿಹಾರಕ ಬಲಿಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ ಬಲಿಪೀಠದ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಣ ಪ್ರಾಕಾರದ ಹೆಬ್ಬಾಗಿಲ ನಿಲವುಕಂಬಗಳಿಗೂ ಹಚ್ಚಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನು ದೋಷಪರಿಹಾರ ಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;