Ezekiel 45:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದವೂ ಮತ್ತು ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವುದು.
Kannada BSI Bible 2016
ಇಪ್ಪತ್ತೈದು ಸಾವಿರ ಮೊಳ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಲಯದಲ್ಲಿ ಸೇವೆಮಾಡುವ ಲೇವಿಯರಿಗೆ ತಮಗೆ ಸ್ವಾಸ್ತ್ಯವಾಗಿ ಇಪ್ಪತ್ತು ಕೊಠಡಿ ಗಳಿಗಾಗಿ ಇರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವದು.
Kannada Bible (KNCL) BSI 2016
ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಕ್ಷೇತ್ರವು ಅವರಿಗೆ ಸೊತ್ತಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಪ್ಪತ್ತೈದು ಸಾವಿರ ಮೊಳ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಲಯದಲ್ಲಿ ಸೇವೆ ಮಾಡುವ ಲೇವಿಯರಿಗೆ ತಮಗೆ ಸೊತ್ತಾಗಿ ಇಪ್ಪತ್ತು ಕೊಠಡಿಗಳಿಗಾಗಿ ಇರಬೇಕು.