Ezekiel 46:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಪೂರ್ಣಾಂಗವಾದ ವರ್ಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಪ್ರತಿ ದಿನ ಅರ್ಪಿಸಬೇಕು. ಪ್ರತಿ ದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
Kannada BSI Bible 2016
ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಪೂರ್ಣಾಂಗವಾದ ವರುಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ದಿನವಹಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
Kannada Bible (KNCL) BSI 2016
“ನೀನು ಕಳಂಕರಹಿತವಾದ ಒಂದು ವರ್ಷದ ಕುರಿಯನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ದಿನಂಪ್ರತಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನೀನು ಪ್ರತಿದಿನವೂ ಯೆಹೋವ ದೇವರಿಗೆ ಒಂದು ವರ್ಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ಧಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.