Ezekiel 46:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಸಬ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನ್ನು ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನ್ನೂ ನಿಷ್ಕಳಂಕವಾದ ಒಂದು ಟಗರನ್ನೂ ಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಬ್ಬತ್ ದಿನದಲ್ಲಿ ಅರಸನು ಯೆಹೋವನಿಗೆ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು.
Kannada BSI Bible 2016
ಪ್ರಧಾನರು ಕರ್ತನಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಬ್ಬತ್‍ದಿನದಲ್ಲಿ ಪ್ರಭುವು ಯೆಹೋವನಿಗೆ ಪೂರ್ಣಾಂಗವಾದ ಆರು ಕುರಿಗಳನ್ನೂ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು;
Kannada Bible (KNCL) BSI 2016
“ಸಬ್ಬತ್‍ದಿನದಲ್ಲಿ ರಾಜನು ಸರ್ವೇಶ್ವರನಿಗೆ ಕಳಂಕರಹಿತವಾದ ಆರು ಕುರಿಗಳನ್ನೂ ಕಳಂಕರಹಿತವಾದ ಒಂದು ಟಗರನ್ನೂ ದಹನಬಲಿಯಾಗಿ ಅರ್ಪಿಸತಕ್ಕದ್ದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರಾಜಕುಮಾರನು ಯೆಹೋವ ದೇವರಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.