Ezekiel 48:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಉತ್ತರದ ಮೇರೆಯು ಭೂಮಧ್ಯ ಸಮುದ್ರದಿಂದ ಪೂರ್ವಕ್ಕೆ ಹೋಗಿ ಅಲ್ಲಿಂದ ಹೆತ್ಲೋನಿಗೂ ಅಲ್ಲಿಂದ ಹಮಾತ್ ಕಣಿವೆಗೂ ಅಲ್ಲಿಂದ ಹಚರ್ ಏನಾನಿಗೂ ಹೋಗುವುದು. ಈ ಸ್ಥಳವು ಹಮಾತ್ ಮತ್ತು ದಮಸ್ಕಸ್‌ನ ಗಡಿಯಲ್ಲಿರುವದು. ಪೂರ್ವದ ಗಡಿಯಿಂದ ಪಶ್ಚಿಮದ ತನಕ ಹೋಗುವ ಈ ಪ್ರಾಂತ್ಯದಲ್ಲಿ ಇಸ್ರೇಲಿನ ದಾನ್, ಆಶೇರ್, ನಫ್ತಾಲಿ, ಮನಸ್ಸೆ, ಎಫ್ರಾಯೀಮ್ ರೂಙೇನ್ ಮತ್ತು ಯೆಹೂದ ಕುಲದ ಜನರಿಗೆ ಭೂಮಿಯು ಸಿಗುವದು. (Verses 1-7)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.
Kannada BSI Bible 2016
ಈಗ ಆ ಗೋತ್ರಗಳ ಹೆಸರುಗಳು ಯಾವವಂದರೆ: ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಗೂ ಹಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿ ಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಮೇರೆಗಳು, ದಾನ್‌ನ ಒಂದು ಭಾಗವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
[ಹಂಚುವಿಕೆಯನ್ನು ಅನುಸರಿಸಿ] ಕುಲಗಳ ಹೆಸರುಗಳು ಇವೇ; [ದೇಶದ] ಕೇವಲ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನಿಗೆ ಒಂದು ಪಾಲು; ಅದರ ಬಡಗಣ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು ಹಮಾತಿನ ದಾರಿಯನ್ನು ದಾಟಿ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವದು; ಅದರ ಪಾರ್ಶ್ವಗಳು [ದೇಶದ] ಪೂರ್ವಪಶ್ಚಿಮಗಳ [ಎಲ್ಲೆಗಳ] ತನಕ ಚಾಚಿಕೊಂಡಿರುವವು.
Kannada Bible (KNCL) BSI 2016
ಆ ಕುಲಗಳ ಹೆಸರುಗಳು ಇವು: ನಾಡಿನ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನಿಗೆ ಒಂದು ಪಾಲು; ಅದರ ಉತ್ತರದ ಮೇರೆ ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು ಹಮಾತಿನ ದಾರಿಯನ್ನು ದಾಟಿ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಗೋತ್ರಗಳ ಹೆಸರುಗಳು ಯಾವುವೆಂದರೆ: “ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಯೂ ಹಾಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಕಡೆಗಳು, ದಾನ್ ಗೋತ್ರಕ್ಕೆ ಒಂದು ಭಾಗವಾಗಿದೆ.