Ezekiel 48:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ವಿಶೇಷವಾದ ಭೂಮಿಯನ್ನು ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು. “ಯಾಜಕರು ಆ ಪ್ರದೇಶದ ಒಂದು ಭಾಗವನ್ನು ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೀಸಲಾದ ಆ ಪವಿತ್ರ ಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರಕ್ಕೆ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳವು, ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವು, ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿದೆ. ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವುದು.
Kannada BSI Bible 2016
ಅವರಿಗಾಗಿ ಅಂದರೆ ಯಾಜಕರಿಗಾಗಿ ಪರಿಶುದ್ಧ ಕಾಣಿಕೆ ಇರಬೇಕು, ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು; ಅದರ ಮಧ್ಯದಲ್ಲಿ ಕರ್ತನ ಪರಿಶುದ್ಧ ಸ್ಥಳವೂ ಇರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೀಸಲಾದ ಆ ಪವಿತ್ರಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು; ಬಡಗಲಲ್ಲಿ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಪಡುವಲಲ್ಲಿ ಅಗಲವು ಹತ್ತು ಸಾವಿರ ಮೊಳ, ಮೂಡಲಲ್ಲಿ ಅಗಲವು ಹತ್ತು ಸಾವಿರ ಮೊಳ, ತೆಂಕಲಲ್ಲಿ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವದು.
Kannada Bible (KNCL) BSI 2016
ಮೀಸಲಾದ ಆ ಪವಿತ್ರಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರದಲ್ಲಿ ಅದರ ಉದ್ದವು ಹನ್ನೆರಡುವರೆ ಕಿಲೋಮೀಟರ್, ಪಶ್ಚಿಮದಲ್ಲಿ ಅಗಲವು ಐದು ಕಿಲೋಮೀಟರ್, ಪೂರ್ವದಲ್ಲಿ ಅಗಲವು ಐದು ಕಿಲೋಮೀಟರ್, ಉತ್ತರದಲ್ಲಿ ಉದ್ದವು ಹನ್ನೆರಡುವರೆ ಕಿಲೋಮೀಟರ್. ಅದರ ಮಧ್ಯೆ ಸರ್ವೇಶ್ವರನ ಪವಿತ್ರಾಲಯವಿರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಿಗಾಗಿ ಎಂದರೆ ಯಾಜಕರಿಗಾಗಿ ಇದೇ ಪರಿಶುದ್ಧ ಕಾಣಿಕೆ ಆಗಿರಬೇಕು. ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು. ಅದರ ಮಧ್ಯದಲ್ಲಿ ಯೆಹೋವ ದೇವರ ಪರಿಶುದ್ಧ ಸ್ಥಳವೂ ಇರಬೇಕು.