Ezekiel 48:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನ್ನೂ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನ್ನು ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನ್ನು ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನ್ನು ಉಪಯೋಗಿಸಘಹುದು. ನಗರವು ಇದರ ಮಧ್ಯದಲ್ಲಿ ಇರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ ಮೀಸಲು ಪಾಲಿನ ಒಟ್ಟು ಅಳತೆಯಲ್ಲಿ ಉಳಿದ ಐದು ಸಾವಿರ ಮೊಳ ಅಗಲದ ಭೂಮಿಯು ಮೀಸಲಿಲ್ಲವೆಂದೆಣಿಸಿ ಪಟ್ಟಣಕ್ಕೆ ಅಂದರೆ ಜನರ ನಿವಾಸಕ್ಕೂ ಮತ್ತು ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ. ಪಟ್ಟಣವು ಅದರ ಮಧ್ಯದಲ್ಲಿರಲಿ.
Kannada BSI Bible 2016
ಅಗಲದಲ್ಲಿ ಮಿಕ್ಕ ಐದು ಸಾವಿರವೂ ಇಪ್ಪತ್ತೈದು ಸಾವಿರಕ್ಕೆ ಎದುರಾಗಿಯೂ ಪಟ್ಟಣಕ್ಕೆ ಸಾಧಾರಣವಾದ ಸ್ಥಳವು ನಿವಾಸಗಳಿಗಾಗಿಯೂ ಉಪ ನಗರಗಳಾಗಿಯೂ ಸಾಧಾರಣವಾದ ಸ್ಥಳವಾಗಿರಬೇಕು; ಪಟ್ಟಣವು ಅದರ ಮಧ್ಯದಲ್ಲಿರಬೇಕು;
Kannada BSI JV (ಕನ್ನಡ ಸತ್ಯವೇದವು J.V. (BSI))
ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ [ಮೀಸಲುಪಾಲಿನ ಒಟ್ಟಳತೆಯಲ್ಲಿ] ವಿುಕ್ಕ ಐದು ಸಾವಿರ ಮೊಳ ಅಗಲದ ಭೂವಿುಯು ಮೀಸಲಲ್ಲವೆಂದೆಣಿಸಿ ರಾಜಧಾನಿಗೆ ಅಂದರೆ ಜನರ ನಿವಾಸಕ್ಕೂ ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ, ರಾಜಧಾನಿಯು ಅದರ ಮಧ್ಯದಲ್ಲಿರಲಿ.
Kannada Bible (KNCL) BSI 2016
ಹನ್ನೆರಡುವರೆ ಕಿಲೋಮೀಟರ್ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ, (ಮೀಸಲುಪಾಲಿನ ಒಟ್ಟಳತೆಯಲ್ಲಿ), ಮಿಕ್ಕ ಎರಡುವರೆ ಕಿಲೋಮೀಟರ್ ಅಗಲದ ಭೂಮಿ ಮೀಸಲಿಲ್ಲವೆಂದೆಣಿಸಿ, ರಾಜಧಾನಿಗೆ ಅಂದರೆ, ಜನರ ನಿವಾಸಕ್ಕೂ ಸುತ್ತಣ ಪ್ರದೇಶಕ್ಕೂ ಪ್ರತ್ಯೇಕವಾಗಿರಲಿ. ರಾಜಧಾನಿ ಅದರ ಮಧ್ಯದಲ್ಲಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಸುಮಾರು ಎರಡೂವರೆ ಕಿಲೋಮೀಟರ್ ಅಗಲ ಮತ್ತು ಸುಮಾರು ಹದಿಮೂರು ಕಿಲೋಮೀಟರ್ ಉದ್ದದ ಉಳಿದ ಪ್ರದೇಶವು ನಗರದ ಸಾಮಾನ್ಯ ಬಳಕೆಗಾಗಿ, ಇದು ಮನೆಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿರುತ್ತದೆ. ನಗರವು ಅದರ ಮಧ್ಯದಲ್ಲಿ ಇರುತ್ತದೆ;