Ezekiel 48:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದ ಅಳತೆಯು ಹೀಗಿರಬೇಕು: ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು, ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು; ಪೂರ್ವದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು ಮತ್ತು ಪಶ್ಚಿಮಕ್ಕೆ ನಾಲ್ಕು ಸಾವಿರದ ಐನೂರು ಮೊಳವು ಇರಬೇಕು.
Kannada BSI Bible 2016
ಅದರ ಅಳತೆಗಳು ಹೀಗಿರ ಬೇಕು; ಉತ್ತರದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ದಕ್ಷಿಣದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪೂರ್ವದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪಶ್ಚಿಮದ ಕಡೆಗೆ ನಾಲ್ಕು ಸಾವಿರದ ಐನೂರ ಮೊಳ;
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜಧಾನಿಯ ಆಳತೆಯು ಹೀಗಿರಬೇಕು; ಬಡಗಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ತೆಂಕಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಮೂಡಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಪಡುವಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ.
Kannada Bible (KNCL) BSI 2016
ರಾಜಧಾನಿಯ ಅಳತೆ ಹೀಗಿರಬೇಕು: ಉತ್ತರದ ಪಕ್ಕವು 2,240 ಮೀಟರ್, ದಕ್ಷಿಣದ ಪಕ್ಕವು 2,250 ಮೀಟರ್, ಪೂರ್ವದ ಪಕ್ಕವು 2,250 ಮೀಟರ್, ಪಶ್ಚಿಮದ ಪಕ್ಕವು 2,250 ಮೀಟರ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮತ್ತು ಅದರ ಅಳತೆಯು ಈ ರೀತಿ ಇರುತ್ತದೆ: ಉತ್ತರದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ದಕ್ಷಿಣದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ಪೂರ್ವಕ್ಕೆ ಸುಮಾರು ಎರಡೂವರೆ ಕಿಲೋಮೀಟರ್, ಪಶ್ಚಿಮಕ್ಕೆ ಸುಮಾರು ಎರಡೂವರೆ ಕಿಲೋಮೀಟರ್.