Ezekiel 48:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಇಪ್ಪತ್ತೈದು ಸಾವಿರ ಮೊಳವು, ಅಗಲ ಇಪ್ಪತ್ತೈದು ಸಾವಿರ ಮೊಳ ಮತ್ತು ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರವು ಪಟ್ಟಣಕ್ಕೆ ಒಳಪಟ್ಟು, ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
Kannada BSI Bible 2016
ಕಾಣಿಕೆಯ ಎಲ್ಲಾ ಸ್ಥಳವು ಇಪ್ಪ ತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು; ನೀವು ಪರಿಶುದ್ಧ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸ್ವಾಸ್ತ್ಯದ ಸಂಗಡ ಅರ್ಪಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೀಸಲಾದ ಪೂರ್ಣಕ್ಷೇತ್ರದ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತೈದು ಸಾವಿರ ಮೊಳ; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರವು ರಾಜಧಾನಿಗೆ ಒಳಪಟ್ಟ ಭೂವಿುಸಹಿತವಾಗಿ ಚಚ್ಚೌಕವಾಗಿರಬೇಕು.
Kannada Bible (KNCL) BSI 2016
ಮೀಸಲಾದ ಪೂರ್ಣಕ್ಷೇತ್ರದ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹನ್ನೆರಡುವರೆ ಕಿಲೋಮೀಟರ್; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರ ರಾಜಧಾನಿಗೆ ಒಳಪಟ್ಟ ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.