Ezekiel 48:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಪ್ರಾಂತ್ಯವನ್ನು ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಬೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಇಸ್ರಾಯೇಲಿನ ಕುಲಗಳಿಗೆ ಸ್ವತ್ತಾಗಿ ಹಂಚಿ ಕೊಡಬೇಕಾದ ದೇಶವು ಇದೇ. ಕುಲಗಳ ಪಾಲುಗಳು ಇವೇ. ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಇಸ್ರಾಯೇಲಿನ ಕುಲಗಳಿಗೆ ಸ್ವಾಸ್ತ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಕುಲಗಳ ಪಾಲುಗಳು ಇವೇ; ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ನೀವು ಇಸ್ರಯೇಲಿನ ಕುಲಗಳಿಗೆ ಸೊತ್ತಾಗಿ ಹಂಚಿಕೊಡಬೇಕಾದ ನಾಡು ಇದೇ; ಕುಲಗಳ ಪಾಲುಗಳೂ ಇವೇ; ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀವು ಇಸ್ರಾಯೇಲಿನ ಗೋತ್ರಗಳಿಗೆ ಚೀಟುಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೆ. ಅದರ ಭಾಗಗಳು ಇವೇ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.