Ezekiel 7:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದುಷ್ಟತನವನ್ನು ದಂಡಿಸಲು ಹಿಂಸೆಯು ಬೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಬ್ಬರೂ ಉಳಿಯುವುದಿಲ್ಲ. ಅವರ ಐಶಬರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಿಂಸೆಯು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿಯೂ, ಅವರ ಆಸ್ತಿಯಲ್ಲಿಯೂ ಏನೂ ಉಳಿಯುವುದಿಲ್ಲ, ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲುವುದಿಲ್ಲ.
Kannada BSI Bible 2016
ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಿಂಸೆಯು ಬೆಳೆದು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ [ಉಳಿಯರು], ಆ ಜನಸಮೂಹದಲ್ಲಿಯೂ ಅವರ ಆಸ್ತಿಯಲ್ಲಿಯೂ [ಶೇಷವೇನೂ ಇರದು]. ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲದು.
Kannada Bible (KNCL) BSI 2016
ಹಿಂಸೆ ಬೆಳೆದು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯರು. ಆ ಜನಸಮೂಹದಲ್ಲೂ ಅವರ ಆಸ್ತಿಯಲ್ಲೂ ಶೇಷವೇನೂ ಇರದು; ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಲಾತ್ಕಾರವು ದುಷ್ಟತನದ ಕೋಲಿನಲ್ಲಿ ಬೆಳೆದಿತ್ತು. ಅವರಲ್ಲಿಯೂ ಅವರ ಜನಸಮೂಹದಲ್ಲಿಯೂ, ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವುದಿಲ್ಲ, ಅವರಲ್ಲಿ ಯಾವ ಮೌಲ್ಯವು ಇರುವುದಿಲ್ಲ.