Ezekiel 7:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ತಮ್ಮ ಬೆಳ್ಳಿಯ ವಿಗ್ರಹಗಳನ್ನು ರಸ್ತೆಗೆ ಬಿಸಾಡುವರು, ಅವರು ಘಂಗಾರದ ವಿಗ್ರಹವನ್ನು ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ಅವರ ಬೆಳ್ಳಿಘಂಗಾರಗಳ ವಿಗ್ರಹಗಳು ಅವರನ್ನು ರಕ್ಷಿಸಲಾರವು. ಅವು ಅವರ ಹಸಿವನ್ನು ನೀಗಿಸಲಾರವು ಅಥವಾ ಅವರ ಹೊಟ್ಟೆಗಳನ್ನು ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ಪದಾರ್ಥದಂತಿರುವುದು; ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರುವುದಿಲ್ಲ, ಅವರ ಹೊಟ್ಟೆ ತುಂಬುವುದಿಲ್ಲ; ಏಕೆಂದರೆ ಅವರ ಆಸ್ತಿಯು ಅವರಿಗೆ ಪಾಪಕಾರಿ ವಿಘ್ನವಾಗಿದೆ.
Kannada BSI Bible 2016
ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು; ಅವರ ಬಂಗಾರವು ತೆಗೆದುಹಾಕಲ್ಪಡುವದು, ಅವರ ಬೆಳ್ಳಿ ಬಂಗಾರಗಳು ಕರ್ತನ ಕೋಪದ ದಿವಸದಲ್ಲಿ ಅವರನ್ನು ತಪ್ಪಿಸಲಾರವು ಮತ್ತು ಅವರ ಪ್ರಾಣಗಳನ್ನು ತೃಪ್ತಿಪಡಿ ಸುವದಿಲ್ಲ. ಅವರ ಕರುಳುಗಳನ್ನು ತುಂಬಿಸುವದಿಲ್ಲ. ಯಾಕಂದರೆ ಅದು ಅವರ ಅಕ್ರಮಗಳ ಎಡತಡೆಯ ಭಾಗವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧಪದಾರ್ಥದಂತಿರುವದು; ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರದು, ಅವರ ಹೊಟ್ಟೆ ತುಂಬದು; ಏಕಂದರೆ ಅವರ ಆಸ್ತಿಯು ಅವರಿಗೆ ಪಾಪಕಾರಿವಿಘ್ನವಾಗಿತ್ತು.
Kannada Bible (KNCL) BSI 2016
ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರ ಅಶುದ್ಧ ಪದಾರ್ಥದಂತಿರುವುದು; ಸರ್ವೇಶ್ವರ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರ ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರದು, ಅವರ ಹೊಟ್ಟೆ ತುಂಬದು; ಏಕೆಂದರೆ ಅವರ ಆಸ್ತಿ ಅವರಿಗೆ ಪಾಪಕ್ಕೆ ಕಾರಣವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ವಸ್ತುವಿನಂತಿರುವುದು. ಅವರ ಬೆಳ್ಳಿ ಬಂಗಾರಗಳು ಯೆಹೋವ ದೇವರ ಕೋಪದ ದಿವಸದಲ್ಲಿ ಅವರನ್ನು ಪಾರು ಮಾಡಲಾರವು. ಇದರಿಂದ ಅವರ ಹಸಿವು ನೀಗುವುದಿಲ್ಲ, ಅವರ ಹೊಟ್ಟೆಗಳನ್ನು ತುಂಬಿಸುವುದಿಲ್ಲ. ಏಕೆಂದರೆ ಅವರ ಆಸ್ತಿಯು ಪಾಪ ಕೃತ್ಯಗಳಿಗೆ ಕಾರಣವಾಗಿತ್ತು.