Ezekiel 7:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬೇರೆ ದೇಶದವರು ಅವರ ಐಶಬರ್ಯವನ್ನು ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನ್ನು ಕೊಳ್ಳೆಯನ್ನಾಗಿ ಕೊಡುವೆನು. ಅವರು ಅದನ್ನು ಹೊಲಸು ಮಾಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನ್ಯರ ಕೈಯಿಂದ ಕೊಳ್ಳೆಹೊಡೆಯಿಸಿ ಲೋಕದ ಅತಿ ದುಷ್ಟರಿಂದ ಸೂರೆಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವರು.
Kannada BSI Bible 2016
ನಾನು ಅದನ್ನು ಅಪರಿಚಿತರ ಕೈಗೆ ಕೊಳ್ಳೆಯಾಗಿಯೂ ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು ಮತ್ತು ಅವರು ಅದನ್ನು ಅಪವಿತ್ರಪಡಿಸುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯರ ಕೈಯಿಂದ ಕೊಳ್ಳೆಹೊಡೆಯಿಸಿ ಲೋಕದ ಅತಿ ದುಷ್ಟರಿಂದ ಸೂರೆ ಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವರು.
Kannada Bible (KNCL) BSI 2016
ಆದಕಾರಣ ಅದನ್ನು ಅವರಿಗೆ ಅಶುದ್ಧ ಪದಾರ್ಥವನ್ನಾಗಿ ಮಾಡುವೆನು. ಅನ್ಯರ ಕೈಯಿಂದ ಕೊಳ್ಳೆ ಹೊಡೆಯಿಸಿ ಲೋಕಕುಖ್ಯಾತ ದುಷ್ಟರಿಂದ ಸೂರೆಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅದನ್ನು ವಿದೇಶಿಯರ ಕೈಗೆ ಕೊಳ್ಳೆಯಾಗಿಯೂ, ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು. ಅವರು ಅದನ್ನು ಅಪವಿತ್ರಪಡಿಸುವರು.