Ezra 1:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರ ನೆರೆಹೊರೆಯವರು ಅವರಿಗೆ ತುಂಬಾ ಕಾಣಿಕೆಗಳನ್ನು ಕೊಟ್ಟರು. ಅವರಿಗೆ ಬೆಳ್ಳಿಬಂಗಾರಗಳನ್ನು, ಪಶುಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಧಾರಾಳವಾಗಿ ಕೊಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು.
Kannada BSI Bible 2016
ಅವರ ಸುತ್ತಲಿರುವವರೆಲ್ಲರೂ ಮನಃ ಪೂರ್ವಕವಾದ ಎಲ್ಲಾ ಕಾಣಿಕೆಗಳ ಹೊರತಾಗಿ ಬೆಳ್ಳಿಯ ಸಾಮಾನು ಗಳಿಂದಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗಳಿಂದಲೂ ಬೆಲೆಯುಳ್ಳವುಗಳಿಂದಲೂ ಅವರಿಗೆ ಸಹಾಯ ಮಾಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು.
Kannada Bible (KNCL) BSI 2016
ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು; ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ನೆರೆಯವರೆಲ್ಲರು ಎಲ್ಲಾ ಕಾಣಿಕೆಗಳಲ್ಲದೇ, ಬೆಳ್ಳಿ ಹಾಗೂ ಬಂಗಾರದಿಂದ ಮಾಡಿದ ವಸ್ತುಗಳಿಂದಲೂ, ಪಶುಗಳಿಂದಲೂ, ಬೆಲೆಯುಳ್ಳವುಗಳಿಂದಲೂ ಅವರಿಗೆ ಧಾರಾಳವಾಗಿ ಸಹಾಯ ಮಾಡಿದರು.