Ezra 10:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಇಲ್ಲಿ ಹೆಚ್ಚು ಜನರು ಸೇರಿಬಂದಿದ್ದಾರೆ. ಮಳೆ ಸುರಿಯುತ್ತಲಿದೆ. ನಾವು ಹೆಚ್ಚು ಸಮಯ ಮಳೆಯಲ್ಲಿರಲು ಸಾಧ್ಯವಿಲ್ಲ. ನಾವು ಬಹಳ ಘೋರವಾದ ಪಾಪಮಾಡಿರುವುದರಿಂದ ಈ ಸಮಸ್ಯೆಯು ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಕೂಡಿಬಂದವರು ಬಹು ಜನರು, ಈಗ ಮಳೆಗಾಲ; ಹೊರಗೆ ನಿಲ್ಲುವುದು ಅಸಾಧ್ಯ. ಈ ಕೆಲಸವು ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧವು ದೊಡ್ಡದು.
Kannada BSI Bible 2016
ಆದರೆ ಜನರು ಅನೇಕರು; ಇದು ಮಳೆಕಾಲ ವಾಗಿರುವದರಿಂದ ಹೊರಗೆ ಇರಲಾರೆವು; ಇದಲ್ಲದೆ ಇದು ಒಂದೆರಡು ದಿವಸದ ಕೆಲಸವಲ್ಲ. ಈ ಕಾರ್ಯ ದಲ್ಲಿ ದ್ರೋಹ ಮಾಡಿದ ನಾವು ಅನೇಕರಾಗಿದ್ದೇವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಕೂಡಿಬಂದವರು ಬಹು ಜನರು; ಈಗ ಮಳೆಗಾಲ; ಹೊರಗೆ ನಿಲ್ಲುವದು ಅಸಾಧ್ಯ. ಈ ಕೆಲಸವು ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧವು ದೊಡ್ಡದು.
Kannada Bible (KNCL) BSI 2016
ಆದರೆ ಕೂಡಿಬಂದಿರುವವರು ಬಹುಮಂದಿ; ಈಗ ಮಳೆಗಾಲ; ಹೊರಗೆ ನಿಲ್ಲುವುದು ಅಸಾಧ್ಯ. ಈ ಕೆಲಸ ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧ ದೊಡ್ಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.