Ezra 3:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರ ಉತ್ಸಾಹಧ್ವನಿಯಲ್ಲಿ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ತಿಳಿಯುತ್ತಿರಲಿಲ್ಲ. ಆದರೆ ಆ ಧ್ವನಿಯು ಬಹುದೂರದವರೆಗೂ ಕೇಳಿಸಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ಮಹಾಧ್ವನಿಯಿಂದ ಅರ್ಭಟಿಸುತ್ತಿದ್ದರಿಂದ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಗೊತ್ತಾಗಲಿಲ್ಲ. ಗದ್ದಲವು ಬಹುದೂರದ ವರೆಗೂ ಕೇಳಿಸಿತು.
Kannada BSI Bible 2016
ಆದರೆ ಅನೇ ಕರು ಸಂತೋಷದಿಂದ ಶಬ್ದವನ್ನೆತ್ತಿ ಆರ್ಭಟಿಸಿದರು. ಆದಕಾರಣ ಸಂತೋಷದಿಂದ ಆರ್ಭಟಿಸಿದ ಶಬ್ದ ಯಾವದೋ ಜನರ ಅಳುವಿಕೆಯ ಶಬ್ದ ಯಾವುದೋ ಎಂದು ಜನರು ತಿಳಿಯಲಾರದಾಗಿತ್ತು. ಜನರು ಮಹಾ ಧ್ವನಿಯಾಗಿ ಆರ್ಭಟಿಸಿದ್ದರಿಂದ ಅವರ ಶಬ್ದವು ದೂರದ ವರೆಗೆ ಕೇಳಲ್ಪಟ್ಟಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರು ಮಹಾಧ್ವನಿಯಿಂದ ಆರ್ಭಟಿಸುತ್ತಿದ್ದದರಿಂದ ಹರ್ಷಧ್ವನಿ ಯಾವದೋ ಅಳುವವರ ಧ್ವನಿ ಯಾವದೋ ಗೊತ್ತಾಗಲಿಲ್ಲ. ಗದ್ದಲವು ಬಹುದೂರದವರೆಗೂ ಕೇಳಿಸಿತು.
Kannada Bible (KNCL) BSI 2016
ಜನರು ಹೀಗೆ ಮಹಾಧ್ವನಿಯಿಂದ ಆರ್ಭಟಿಸುತ್ತಾ ಇದ್ದುದರಿಂದ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ಹೇಳಲಾಗಲಿಲ್ಲ. ಗದ್ದಲವು ಬಹುದೂರದವರೆಗೂ ಕೇಳಿಸುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರು ಹೀಗೆ ಮಹಾಧ್ವನಿಯಿಂದ ಆರ್ಭಟಿಸುತ್ತಾ ಇದ್ದುದರಿಂದ, ಹರ್ಷಧ್ವನಿ ಯಾವುದು, ಅಳುವವರ ಧ್ವನಿ ಯಾವುದು ಎಂದು ಗುರುತಿಸಲಾಗಲಿಲ್ಲ. ಗದ್ದಲವು ಬಹು ದೂರದವರೆಗೂ ಕೇಳಿಸುತ್ತಿತ್ತು.