Ezra 3:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವಾಲಯವು ತಿರಿಗಿ ಕಟ್ಟಲ್ಪಡದಿದ್ದರೂ ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಇಸ್ರೇಲರು ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ಪ್ರಾರಂಭಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸತೊಡಗಿದರು. ಆಗ ಯೆಹೋವನ ಆಲಯದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.
Kannada BSI Bible 2016
ಏಳನೇಯ ತಿಂಗಳಿನ ಮೊದಲನೇ ದಿವಸದಲ್ಲಿ ಕರ್ತ ನಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಕರ್ತನ ಮಂದಿರದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಯೆಹೋವನಿಗೆ ಸರ್ವಾಂಗಹೋಮಗಳನ್ನರ್ಪಿಸತೊಡಗಿದರು. ಆಗ ಯೆಹೋವನ ಆಲಯದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.
Kannada Bible (KNCL) BSI 2016
ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಹೀಗೆ ಸರ್ವೇಶ್ವರನಿಗೆ ದಹನಬಲಿಗಳನ್ನು ಅರ್ಪಿಸತೊಡಗಿದರು. ಆಗ ಸರ್ವೇಶ್ವರನ ಆಲಯದ ಅಸ್ತಿವಾರವನ್ನು ಇನ್ನೂ ಹಾಕಿರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಳನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಯೆಹೋವ ದೇವರ ಮಂದಿರದ ಅಸ್ತಿವಾರವನ್ನು ಇನ್ನೂ ಹಾಕಿರಲಿಲ್ಲ.