Ezra 4:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದೇ ಸಮಯದಲ್ಲಿ ರಾಜರೇ, ನೀವು ತಿಳಿಯಬೇಕಾದ ವಿಷಯವೇನೆಂದರೆ, ಜೆರುಸಲೇಮ್ ಮತ್ತು ಅದರ ಪೌಳಿಗೋಡೆಗಳು ಕಟ್ಟಲ್ಪಟ್ಟಲ್ಲಿ ಅಲ್ಲಿಯ ಪ್ರಜೆಗಳು ತೆರಿಗೆ ಕೊಡುವುದನ್ನು ನಿಲ್ಲಿಸುವರು. ನಿನಗೆ ಕಪ್ಪಕಾಣಿಕೆ ಸಲ್ಲಿಸುವುದನ್ನೂ ಇತರ ತೆರಿಗೆಗಳನ್ನು ಕೊಡುವುದನ್ನೂ ನಿಲ್ಲಿಸುವರು. ಇದರಿಂದಾಗಿ ರಾಜರಿಗೆ ದೊಡ್ಡ ನಷ್ಟವಾಗಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಕಟ್ಟುವುದು ಮುಕ್ತಾಯಗೊಂಡರೆ ಅವರು ಕಪ್ಪ, ತೆರಿಗೆ ಮತ್ತು ಸುಂಕಗಳನ್ನು ಪಾವತಿಸಲಿಕ್ಕಿಲ್ಲ ಮತ್ತು ಕಡೆಯಲ್ಲಿ ಇದರಿಂದ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
Kannada BSI Bible 2016
ಈ ಪಟ್ಟಣವು ಕಟ್ಟಿಸಲ್ಪಟ್ಟು ಅದರ ಗೋಡೆಕಟ್ಟಿ ತೀರಿಸ ಲ್ಪಟ್ಟರೆ ಅವರು ಸುಂಕವನ್ನೂ ಕಪ್ಪವನ್ನೂ ತೆರಿಗೆಯನ್ನೂ ಕೊಡದೆ ಇರುವರು. ಆಗ ನೀನು ಅರಸು ಗಳಿಗೆ ಬರುವ ಹುಟ್ಟುವಳಿಗೆ ನಷ್ಟಮಾಡುವಿ ಎಂದು ಅರಸನಿಗೆ ತಿಳಿದಿರಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಕಟ್ಟುವದು ಕೊನೆಗಾಣುವದಾದರೆ ಅವರು ಕಪ್ಪ ತೆರಿಗೆ ಸುಂಕಗಳನ್ನು ಕೊಡಲಿಕ್ಕಿಲ್ಲ. ಮತ್ತು ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವದೆಂದು ಖಾವಂದರಿಗೆ ತಿಳಿದಿರಲಿ.
Kannada Bible (KNCL) BSI 2016
ಆ ಪಟ್ಟಣವನ್ನೂ ಅದರ ಪೌಳಿಗೋಡೆಗಳನ್ನೂ ಕಟ್ಟುವುದು ಮುಗಿಸಿದರೆ ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ; ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಕಟ್ಟುವುದು ಮುಗಿದರೆ, ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ. ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.