Ezra 4:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
See verse 1
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು ಅವರಿಗೆ, “ನಿಮ್ಮೊಡನೆ ದೇವಾಲಯ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ, ಯಾಕೆಂದರೆ ನಿಮ್ಮಂತೆ ನಾವು ನಿಮ್ಮ ದೇವರ ಭಕ್ತರಾಗಿದ್ದೇವೆ. ನಮ್ಮನ್ನು ಇಲ್ಲಿ ತಂದಿರಿಸಿದ ಅಶ್ಶೂರದ ಅರಸನಾದ ಏಸರ್ಹದ್ದೋನನ ಕಾಲದಿಂದ ನಾವು ಆತನಿಗೇ ಯಜ್ಞಸಮರ್ಪಣೆಯನ್ನು ಮಾಡುತ್ತಾ ಬಂದಿದ್ದೇವೆ” ಎಂದು ಹೇಳಿದರು.
Kannada BSI Bible 2016
ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು ಅವರಿಗೆ - ನಿಮ್ಮೊಡನೆ ಕಟ್ಟುವದಕ್ಕೆ ನಮಗೂ ಅಪ್ಪಣೆಯಾಗಲಿ; ಯಾಕಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರಾಗಿದ್ದೇವೆ; ನಮ್ಮನ್ನು ಇಲ್ಲಿ ತಂದಿರಿಸಿದ ಅಶ್ಶೂರದ ಅರಸನಾದ ಏಸರ್ಹದ್ದೋನನ ಕಾಲದಿಂದ ನಾವು ಆತನಿಗೇ ಯಜ್ಞಾರ್ಪಣೆಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.
Kannada Bible (KNCL) BSI 2016
ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಜೆರುಬ್ಬಾಬೆಲನ ಬಳಿಗೂ, ಕುಟುಂಬಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ, “ನಾವು ನಿಮ್ಮ ಹಾಗೆ ನಿಮ್ಮ ದೇವರನ್ನು ಹುಡುಕುತ್ತೇವೆ. ನಮ್ಮನ್ನು ಇಲ್ಲಿಗೆ ಬರಮಾಡಿದ ಅಸ್ಸೀರಿಯದ ಅರಸನಾದ ಏಸರ್‌ಹದ್ದೋನ್ ಎಂಬವನ ದಿವಸಗಳು ಮೊದಲುಗೊಂಡು, ಅವರಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ, ಕಟ್ಟುವುದರಲ್ಲಿ ನಾವು ಸಹಾಯ ಮಾಡುತ್ತೇವೆ,” ಎಂದರು.