Ezra 4:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದ ಜನರ ವಿರುದ್ಧವಾಗಿರಲು ಸರಕಾರದ ಅಧಿಕಾರಿಗಳಿಗೆ ಲಂಚಕೊಟ್ಟು ಪ್ರೋತ್ಸಾಹಿಸಿದರು. ಯೆಹೂದ್ಯರು ದೇವಾಲಯ ಕಟ್ಟುವ ಕಾರ್ಯವನ್ನು ನಿಲ್ಲಿಸಲು ಈ ಅಧಿಕಾರಿಗಳು ಪದೇಪದೇ ತೊಂದರೆಪಡಿಸಿದರು. ಪರ್ಶಿಯಾದ ಅರಸನಾದ ಸೈರಸನ ರಾಜ್ಯಭಾರದ ಆಳ್ವಿಕೆಯಲ್ಲಿಯೂ ಅವನ ನಂತರ ಪಟ್ಟಕ್ಕೆ ಬಂದ ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಇದೇ ರೀತಿ ಮುಂದುವರಿಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪರ್ಷಿಯ ರಾಜನಾದ ಕೋರೆಷನ ಕಾಲದಿಂದ ಪರ್ಷಿಯ ರಾಜನಾದ ದಾರ್ಯಾವೆಷನ ಆಳ್ವಿಕೆಯವರೆಗೂ ಇದು ಮುಂದುವರಿಯಿತು.
Kannada BSI Bible 2016
ಪಾರಸಿ ಯರ ಅರಸನಾದ ಕೋರೆಷನ ದಿನಗಳಲ್ಲೆಲ್ಲಾ ಪಾರ ಸಿಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಪರ್ಯಂತರ ಅವರ ಯೋಚನೆಯನ್ನು ವ್ಯರ್ಥಮಾಡು ವದಕ್ಕೆ ಅವರಿಗೆ ವಿರೋಧವಾಗಿ ಯೋಚನಾಕರ್ತರನ್ನು ಕೂಲಿಗೆ ಇಟ್ಟು ಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಉದ್ದೇಶವನ್ನು ಕೆಡಿಸುವದಕ್ಕೋಸ್ಕರ ಹಣಕೊಟ್ಟು ವಕೀಲರನ್ನು ಇಟ್ಟುಕೊಂಡರು. ಪಾರಸಿಯ ರಾಜನಾದ ಕೋರೆಷನ ಕಾಲ ಮೊದಲುಗೊಂಡು ಪಾರಸಿಯ ರಾಜನಾದ ದಾರ್ಯಾವೆಷನ ಆಳಿಕೆಯವರೆಗೂ ಈ ಪ್ರಕಾರ ನಡೆಯಿತು.
Kannada Bible (KNCL) BSI 2016
ಅವರ ಉದ್ದೇಶವನ್ನು ತಡೆಗಟ್ಟಲು ಹಣಕೊಟ್ಟು ವಕೀಲರನ್ನು ಇಟ್ಟರು. ಈ ಪ್ರಕರಣ ಪರ್ಷಿಯರಾಜ ಸೈರಸನ ಕಾಲದಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯವರೆಗೂ ನಡೆಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಾರಸಿಯ ಅರಸನಾದ ಕೋರೆಷನ ದಿನಗಳಿಂದ ಹಿಡಿದು, ಪಾರಸಿಯ ಅರಸನಾದ ದಾರ್ಯಾವೆಷನ ಆಳ್ವಿಕೆಯವರೆಗೂ, ಅವರ ಯೋಚನೆಯನ್ನು ವ್ಯರ್ಥಮಾಡುವುದಕ್ಕೆ ಅವರ ವಿರೋಧವಾಗಿ ವಕೀಲರನ್ನು ಹಣಕೊಟ್ಟು ಇಟ್ಟುಕೊಂಡರು.