Ezra 4:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಶತ್ರುಗಳು ಪರ್ಶಿಯ ರಾಜನಿಗೆ ಪತ್ರವನ್ನು ಬರೆದು ದೇವಾಲಯವನ್ನು ಕಟ್ಟುವ ಕಾರ್ಯವನ್ನು ನಿಲ್ಲಿಸಬೇಕೆಂದು ಬೇಡಿಕೊಂಡರು. ಅಹಷ್ವೇರೋಷನು ಪರ್ಶಿಯ ದೇಶದ ಅರಸನಾದಾಗ ಅವನಿಗೆ ಪತ್ರ ಬರೆದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಹಷ್ವೇರೋಷನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ವಾಸ ಮಾಡುತ್ತಿದ್ದವರ ವಿರುದ್ಧವಾಗಿ ಆಪಾದನೆಯ ಪತ್ರವನ್ನು ಬರೆದರು.
Kannada BSI Bible 2016
ಆದರೆ ಅಹಷ್ವೇರೋಷನು ಆಳುವಾಗ ಅವನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಕಾಗದ ಬರೆದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಹಷ್ವೇರೋಷನ ಆಳಿಕೆಯ ಪ್ರಾರಂಭದಲ್ಲಿ ಅವರು ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ ವಾಸಿಸುವವರಿಗೆ ವಿರೋಧವಾಗಿ ಆಪಾದನ ಪತ್ರವನ್ನು ಬರೆದರು.
Kannada Bible (KNCL) BSI 2016
ಇದಲ್ಲದೆ, ಅಹಷ್ಟೇರೋಷನ ಆಳ್ವಿಕೆಯ ಆರಂಭದಲ್ಲಿ ಅವರು ಜುದೇಯ ಹಾಗು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದವರಿಗೆ ವಿರುದ್ಧ ಆಪಾದನ ಪತ್ರವನ್ನು ಬರೆದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅಹಷ್ವೇರೋಷನು ಆಳುವಾಗ, ಅವನ ಆಳ್ವಿಕೆಯ ಪ್ರಾರಂಭದಲ್ಲಿ, ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಸಲ್ಲಿಸಿದರು.