Ezra 5:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅರಸನಾದ ಸೈರಸನು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ), “ಈ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಜೆರುಸಲೇಮಿನ ದೇವಾಲಯದಲ್ಲಿಡು. ಹಿಂದೆ ದೇವಾಲಯವು ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಅದನ್ನು ಪುನಃ ಕಟ್ಟು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು, “ಈ ಸಾಮಾನುಗಳನ್ನು ಯೆರೂಸಲೇಮಿನ ದೇವಾಲಯದಲ್ಲಿ ಇಡುವುದಕ್ಕೋಸ್ಕರ ತೆಗೆದುಕೊಂಡುಹೋಗಿ ಆ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟಿಸು” ಎಂದು ಆಜ್ಞಾಪಿಸಿದನು.
Kannada BSI Bible 2016
ಈ ಪಾತ್ರೆಗಳನ್ನು ತೆಗೆದುಕೊಂಡು ಯೆರೂ ಸಲೇಮಿನಲ್ಲಿರುವ ಆಲಯಕ್ಕೆ ತಕ್ಕೊಂಡು ಹೋಗು; ದೇವರ ಆಲಯವು ಅದರ ಸ್ಥಳದಲ್ಲಿ ಕಟ್ಟಿಸಲ್ಪಡಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನಿಗೆ - ಈ ಸಾಮಾನುಗಳನ್ನು ಯೆರೂಸಲೇವಿುನ ದೇವಾಲಯದಲ್ಲಿಡುವದಕ್ಕೋಸ್ಕರ ತೆಗೆದುಕೊಂಡು ಹೋಗಿ ಆ ದೇವಾಲಯವನ್ನು ತಿರಿಗಿ ಅದರ ಸ್ಥಳದಲ್ಲಿ ಕಟ್ಟಿಸು ಎಂದು ಆಜ್ಞಾಪಿಸಿದನು.
Kannada Bible (KNCL) BSI 2016
ಅವನಿಗೆ, ‘ಈ ಸಾಮಗ್ರಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿಡುವುದಕ್ಕಾಗಿ ತೆಗೆದುಕೊಂಡು ಹೋಗಿ ಆ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟಿಸು,’ ಎಂದು ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನಿಗೆ, ‘ಈ ಸಾಮಗ್ರಿಗಳನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ತೆಗೆದುಕೊಂಡು ಹೋಗು. ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟು,’ ಎಂದು ಆಜ್ಞಾಪಿಸಿದನು.