Ezra 5:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜರಾದ ತಾವು ಅಪೇಕ್ಷಿಸಿದರೆ ರಾಜವೃತ್ತಾಂತವನ್ನು ನೀವೇ ಪರಿಶೋಧಿಸಿ. ಜೆರುಸಲೇಮಿನಲ್ಲಿ ಮತ್ತೆ ದೇವಾಲಯವನ್ನು ಕಟ್ಟಲು ರಾಜ ಸೈರಸನು ಆಜ್ಞಾಪಿಸಿದ್ದು ನಿಜವೇ ಎಂಬುದನ್ನು ನೀವೇ ನೋಡಿರಿ. ಆಮೇಲೆ, ಅರಸನೇ, ಇದರ ವಿಚಾರವಾಗಿ ಏನು ತೀರ್ಮಾನ ಮಾಡಿದ್ದೀರೆಂದು ನಮಗೆ ಪತ್ರದ ಮೂಲಕ ತಿಳಿಸಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅರಸರಿಗೆ ಸರಿತೋರುವುದಾದರೆ ಯೆರೂಸಲೇಮಿನ ಈ ದೇವಾಲಯವನ್ನು ಪುನಃ ಕಟ್ಟುವುದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ವಿಷಯವಾಗಿ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿ ನೋಡಲಿ ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ” ಎಂದು ಉತ್ತರಕೊಟ್ಟನು.
Kannada BSI Bible 2016
ಆದದರಿಂದ ಅರಸನಿಗೆ ಚೆನ್ನಾಗಿ ಕಾಣಿಸಿದರೆ ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ ಇಲ್ಲವೋ ಹುಡುಕು; ಬಾಬೆಲಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲ್ಪಡಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನಿಗೆ ಸರಿತೋಚುವದಾದರೆ ಯೆರೂಸಲೇವಿುನ ಈ ದೇವಾಲಯವನ್ನು ತಿರಿಗಿ ಕಟ್ಟುವದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬದರ ವಿಷಯವಾಗಿ ಬಾಬೆಲಿನ ರಾಜ ಭಂಡಾರದಲ್ಲಿ ಹುಡುಕಿನೋಡಲಿ. ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬದು ನಮಗೆ ತಿಳಿಸೋಣವಾಗಲಿ ಎಂಬದೇ.
Kannada Bible (KNCL) BSI 2016
“ಅರಸರಿಗೆ ಸರಿತೋರುವುದಾದರೆ, ಜೆರುಸಲೇಮಿನ ಈ ದೇವಾಲಯವನ್ನು ಮರಳಿ ಕಟ್ಟುವುದಕ್ಕೆ ಅರಸ ಸೈರಸನ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ಬಗ್ಗೆ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿನೋಡಬೇಕು. ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ ಅರಸನಿಗೆ ಸರಿ ತೋರುವುದಾದರೆ, ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ, ಇಲ್ಲವೋ ಎಂಬುದನ್ನು ಬಾಬಿಲೋನಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.