Ezra 6:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೀಗೆ ಯೆಹೂದ್ಯರ ಹಿರಿಯರು ದೇವಾಲಯದ ಕಟ್ಟಡ ಕೆಲಸವನ್ನು ಮುಂದುವರಿಸಿದರು. ಪ್ರವಾದಿಯಾದ ಹಗ್ಗೈನಂತೆ ಮತ್ತು ಇದ್ದೋವಿನ ಮಗನಾದ ಜೆಕರೀಯನಂತೆ ಅವರನ್ನು ಪ್ರೋತ್ಸಾಹಿಸುತ್ತಾ ಇದ್ದರು. ಆದ್ದರಿಂದ ಅವರು ಯಶಸ್ವಿಯಾದರು. ದೇವಾಲಯದ ಕೆಲಸ ಮುಗಿಯಿತು. ಇಸ್ರೇಲಿನ ದೇವರ ಆಜ್ಞೆಗೆ ವಿಧೇಯರಾಗಿಯೂ, ಸೈರಸ್, ದಾರ್ಯಾವೆಷ ಮತ್ತು ಅರ್ತಷಸ್ತ ಎಂಬ ಪರ್ಶಿಯ ಅರಸರ ಆಜ್ಞೆಗೆ ವಿಧೇಯರಾಗಿಯೂ ಕಟ್ಟಡದ ಕೆಲಸವನ್ನು ಸಂಪೂರ್ಣ ಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದ್ಯರ ಹಿರಿಯರು, ಪ್ರವಾದಿಯಾದ ಹಗ್ಗೈ, ಇದ್ದೋವಿನ ಮಗನಾದ ಜೆಕರೀಯ ಇವರ ಪ್ರವಾದನೆಯಿಂದ ಪ್ರೇರಿತರಾಗಿ ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಾಯೇಲ್ ದೇವರ ಆಜ್ಞಾನುಸಾರವಾಗಿಯೂ ಪರ್ಷಿಯ ರಾಜರಾದ ಕೋರೆಷ್, ದಾರ್ಯಾವೆಷ್, ಅರ್ತಷಸ್ತ ಇವರ ಅಪ್ಪಣೆಯ ಆಧಾರದಿಂದಲೂ ಕಟ್ಟಡವನ್ನು ಮುಗಿಸಿದರು.
Kannada BSI Bible 2016
ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ ಇದ್ದೋನನ ಮಗ ನಾದ ಜೆಕರೀಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿ ಯನ್ನು ಹೊಂದಿದರು. ಅವರು ಇಸ್ರಾಯೇಲ್‌ ದೇವರ ಅಪ್ಪಣೆಯ ಪ್ರಕಾರವೂ ಕೋರೆಷನು ದಾರ್ಯಾವೆಷನು ಪಾರಸಿಯ ಅರಸನಾದ ಅರ್ತಷಸ್ತನು ಎಂಬವರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದ್ಯರ ಹಿರಿಯರು ಪ್ರವಾದಿಯಾದ ಹಗ್ಗೈ, ಇದ್ದೋವಿನ ಮಗನಾದ ಜೆಕರೀಯ ಇವರ ಪ್ರಬೋಧನೆಯಿಂದ ಪ್ರೇರಿತರಾಗಿ ಕಟ್ಟುವ ಕೆಲಸವನ್ನು ಸಾಗಿಸುತ್ತಾ ಬಂದು ಇಸ್ರಾಯೇಲ್ ದೇವರ ಆಜ್ಞಾನುಸಾರವಾಗಿಯೂ ಪಾರಸಿಯ ರಾಜರಾದ ಕೋರೆಷ್, ದಾರ್ಯಾವೆಷ್, ಅರ್ತಷಸ್ತ ಇವರ ಅಪ್ಪಣೆಯ ಆಧಾರದಿಂದಲೂ ಕಟ್ಟಡವನ್ನು ಮುಗಿಸಿದರು.
Kannada Bible (KNCL) BSI 2016
ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗೈ ಹಾಗು ಇದ್ದೋವಿನ ಮಗ ಜೆಕರೀಯ ಅವರ ಪ್ರಬೋಧನೆಯಿಂದ ಪ್ರೇರಿತರಾಗಿ, ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಯೇಲ್ ದೇವರ ಆಜ್ಞಾನುಸಾರ ಪರ್ಷಿಯದ ರಾಜ ಸೈರಸನ, ದಾರ್ಯಾವೆಷ್ ಹಾಗು ಅರ್ತಷಸ್ತ ಅವರ ಅಪ್ಪಣೆಯ ಆಧಾರದಿಂದ ಕಟ್ಟಡವನ್ನು ಮುಗಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗನಾದ ಜೆಕರ್ಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿಯನ್ನು ಹೊಂದಿದರು. ಅವರು ಇಸ್ರಾಯೇಲ್ ದೇವರ ಅಪ್ಪಣೆಯ ಪ್ರಕಾರವೂ, ಕೋರೆಷ್, ದಾರ್ಯಾವೆಷ್ ಹಾಗೂ ಅರ್ತಷಸ್ತ ಎಂಬ ಪರ್ಷಿಯದ ರಾಜರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು.