Ezra 7:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವುಗಳನ್ನು ನೀವು ಎಜ್ರನಿಗೆ ಕೊಡಬೇಕು: ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿ, ಇಪ್ಪತ್ತೆರಡು ಸಾವಿರ ಕಿಲೋಗ್ರಾಂ ಗೋಧಿ, ಎರಡು ಸಾವಿರದ ಇನ್ನೂರು ಲೀಟರ್ ದ್ರಾಕ್ಷಾರಸ, ಎರಡು ಸಾವಿರದ ಇನ್ನೂರು ಲೀಟರ್ ಆಲಿವ್ ಎಣ್ಣೆ ಮತ್ತು ಬೇಕಾಗುವಷ್ಟು ಉಪ್ಪು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೂರು ತಲಾಂತು ಬೆಳ್ಳಿ, ನೂರು ಕೋರ್ ಗೋದಿ ನೂರು ಬತ್ ದ್ರಾಕ್ಷಾರಸ, ಎಣ್ಣೆ ನೂರು ಬತ್ ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
Kannada BSI Bible 2016
ಪರಲೋಕದ ದೇವರ ನ್ಯಾಯಪ್ರಮಾಣದ ಶಾಸ್ತ್ರಿಯಾಗಿರುವ ಯಾಜ ಕನಾದ ಎಜ್ರನು ನಿಮ್ಮಿಂದ ಏನಾದರೂ ಕೇಳಿದರೆ ಬೆಳ್ಳಿಯು ನೂರು ತಲಾಂತಿನ ಮಟ್ಟಿಗೂ ಗೋಧಿಯು ನೂರು ಕೊಳಗದ ಮಟ್ಟಿಗೂ ದ್ರಾಕ್ಷಾರಸವು ನೂರು ಬುದ್ದಲಿಯ ವರೆಗೂ ಎಣ್ಣೆಯು ನೂರು ಬುದ್ದಲಿಯ ವರೆಗೂ ಉಪ್ಪು ಬೇಕಾದಷ್ಟು ತ್ವರೆಯಾಗಿ ಕೊಡಲ್ಪಡಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಳ್ಳಿಯನ್ನು ನೂರು ತಲಾಂತು, ಗೋದಿಯನ್ನು ನೂರು ಕೋರ್, ದ್ರಾಕ್ಷಾರಸವನ್ನು ನೂರು ಬತ್, ಎಣ್ಣೆಯನ್ನು ನೂರು ಬತ್ ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
Kannada Bible (KNCL) BSI 2016
ಬೆಳ್ಳಿಯನ್ನು 3400 ಕಿಲೋಗ್ರಾಂ, ಗೋದಿಯನ್ನು 10,000 ಕಿಲೋಗ್ರಾಂ, ದ್ರಾಕ್ಷಾರಸವನ್ನು 200 ಲೀಟರ್, ಎಣ್ಣೆಯನ್ನು 2000 ಲೀಟರ್ ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
3.4 ಮೆಟ್ರಿಕ್ ಟನ್ ಬೆಳ್ಳಿಯನ್ನು, 16 ಮೆಟ್ರಿಕ್ ಟನ್ ಗೋಧಿಯನ್ನು, 2,200 ಲೀಟರ್ ದ್ರಾಕ್ಷಾರಸವನ್ನು, 2,200 ಲೀಟರ್ ಎಣ್ಣೆಯನ್ನು, ಇಷ್ಟರ ಮಟ್ಟಿಗೂ ಕೊಡಬೇಕು. ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.