Ezra 7:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಗೌರವಿಸುವ ಮನಸ್ಸನ್ನು ರಾಜನ ಹೃದಯದಲ್ಲಿರಿಸಿದ್ದಕ್ಕೆ ಆತನಿಗೆ ಸ್ತೋತ್ರ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಜ್ರನು ನೀಡಿದ ಪ್ರತಿಕ್ರಿಯೆ, “ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಅರಸನು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯವನ್ನು ಶೋಭಾಯಮಾನದ ಸ್ಥಿತಿಗೆ ತರುವುದಕ್ಕೆ ಆತನ ಪ್ರೇರಣೆಯಿಂದಲೇ ಮನಸ್ಸುಮಾಡಿದ್ದಾನೆ. ಅರಸನು ಅವನ ಮಂತ್ರಿಗಳ ಮತ್ತು ಅವನ ಎಲ್ಲಾ ಶ್ರೇಷ್ಠರಾದ ಸರದಾರರ ಮುಂದೆ ನನಗೆ ದಯೆತೋರಿಸಿದ್ದಾನೆ.
Kannada BSI Bible 2016
ಆಗ ಎಜ್ರನು -- ಯೆರೂಸಲೇಮಿನಲ್ಲಿರುವ ಕರ್ತನ ಆಲಯವನ್ನು ಅಲಂಕರಿಸುವದಕ್ಕೆ ಅರ ಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟು ಅರಸನ ಮುಂದೆಯೂ ಅವನ ಸಲಹೆಗಾರರ ಮುಂದೆಯೂ ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆ ಮಾಡಿದ ನಮ್ಮ ತಂದೆಗಳ ದೇವರಾಗಿ ರುವ ಕರ್ತನು ಸ್ತುತಿಸಲ್ಪಡಲಿ.ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
[ಎಜ್ರನು ಹೇಳಿದ್ದು - ] ನಮ್ಮ ಪಿತೃಗಳ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಅರಸನು ಯೆರೂಸಲೇವಿುನಲ್ಲಿರುವ ಯೆಹೋವನ ಆಲಯವನ್ನು ಶೋಭಿಸುವ ಸ್ಥಿತಿಗೆ ತರುವದಕ್ಕೆ ಆತನ ಪ್ರೇರಣೆಯಿಂದಲೇ ಮನಸ್ಸು ಮಾಡಿದ್ದಾನೆ;
Kannada Bible (KNCL) BSI 2016
ಎಜ್ರನ ಮಾತುಗಳು ಇವು: “ನಮ್ಮ ಪಿತೃಗಳ ದೇವರಾದ ಸರ್ವೇಶ್ವರಸ್ವಾಮಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಶೋಭಿಸುವ ಸ್ಥಿತಿಗೆ ತರುವುದಕ್ಕೆ ಸರ್ವೇಶ್ವರನ ಪ್ರೇರಣೆಯಿಂದಲೇ ಅರಸನು ಮನಸ್ಸು ಮಾಡಿದ್ದಾನೆ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಎಜ್ರನು, “ನಮ್ಮ ತಂದೆಗಳ ದೇವರಾಗಿರುವ ಯೆಹೋವ ದೇವರು ಸ್ತುತಿಹೊಂದಲಿ! ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಮಹಿಮೆಯನ್ನು ತರುವಂತೆ, ಅರಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟಿದ್ದಾರೆ.