Ezra 8:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾಲ್ಕನೆಯ ದಿನ ನಾವು ದೇವಾಲಯಕ್ಕೆ ಹೋಗಿ ಅಲ್ಲಿ ಬೆಳ್ಳಿ, ಚಿನ್ನ ಮತ್ತು ಇತರ ಶ್ರೇಷ್ಠವಸ್ತುಗಳನ್ನು ತೂಗಿ ಯಾಜಕನಾದ ಊರೀಯನ ಮಗನಾದ ಮೆರೇಮೋತನಿಗೆ ಒಪ್ಪಿಸಿದೆವು. ಫೀನೆಹಾಸನ ಮಗನಾದ ಎಲ್ಲಾಜಾರನು ಮೆರೇಮೋತನ ಸಂಗಡವಿದ್ದನು. ಲೇವಿಯರಾದ ಯೇಷೂವನ ಮಗನಾದ ಯೋಜಾಚಾದನು ಮತ್ತು ಬಿನ್ನೂಯಿಯ ಮಗನಾದ ನೋವದ್ಯನು ಅವರ ಸಂಗಡ ಇದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗನಾದ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗನಾದ ಯೋಜಾಬಾದ್, ಬಿನ್ನೂಯನ ಮಗನಾದ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.
Kannada BSI Bible 2016
ಅವನ ಸಂಗಡ ಲೇವಿ ಯರಾದ ಫಿನೇಹಾಸನ ಮಗನಾಗಿರುವ ಎಲ್ಲಾಜಾ ರನೂ ಯೇಷೂವನ ಮಗನಾದ ಯೋಜಾಬಾದನೂ ಬಿನ್ನೂಯ ಮಗನಾದ ನೋವದ್ಯನೂ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗನಾದ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗನಾದ ಯೋಜಾಬಾದ್, ಬಿನ್ನೂಯನ ಮಗನಾದ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.
Kannada Bible (KNCL) BSI 2016
ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿ ಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗ ಯೋಜಾಬಾದ್, ಬಿನ್ನೂಯನ ಮಗ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ನಾಲ್ಕನೆಯ ದಿವಸದಲ್ಲಿ ಆ ಬೆಳ್ಳಿಯೂ, ಬಂಗಾರವೂ, ಸಲಕರಣೆಗಳೂ ನಮ್ಮ ದೇವರ ಆಲಯದಲ್ಲಿ ಯಾಜಕರಾಗಿರುವ ಊರೀಯನ ಮಗ ಮೆರೇಮೋತನ ಕೈಯಿಂದ ತೂಕಮಾಡಿ ಕೊಟ್ಟೆವು. ಅವನ ಸಂಗಡ ಲೇವಿಯರಾದ ಫೀನೆಹಾಸನ ಮಗನಾಗಿರುವ ಎಲಿಯಾಜರನೂ, ಯೇಷೂವನ ಮಗ ಯೋಜಾಬಾದನೂ, ಬಿನ್ನೂಯ್ ಮಗ ನೋವದ್ಯನೂ ಇದ್ದರು.