Galatians 4:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ನಿಮ್ಮನ್ನು ಮೆಚ್ಚಿಸುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿರುವುದು ಒಳಿತಾಗಿ ಅಲ್ಲ, ನೀವು ಅವರಿಗೆ ಆಸಕ್ತಿಯನ್ನು ತೋರಿಸಬೇಕೆಂದು ಅವರು ನಿಮ್ಮನ್ನು ನನ್ನಿಂದ ಆಗಲಿಸುವುದಕ್ಕೆ ಬಯಸುತ್ತಿದ್ದಾರೆ.
Kannada BSI Bible 2016
ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಲ್ಲ; ಹೌದು, ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗ ಲಿಸುವದಕ್ಕೆ ಅಪೇಕ್ಷಿಸುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಂಥವರಾಗಿರದೆ ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗಲಿಸುವದಕ್ಕೆ ಅಪೇಕ್ಷಿಸುತ್ತಾರೆ.
Kannada Bible (KNCL) BSI 2016
ಆ ನನ್ನ ವಿರೋಧಿಗಳು ನಿಮ್ಮನ್ನು ಮೆಚ್ಚಿಸಲು ತುಂಬ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ಅವರ ಉದ್ದೇಶ ಒಳ್ಳೆಯದಲ್ಲ. ನೀವು ಸಹ ಅವರನ್ನು ಅಷ್ಟೇ ಆಸಕ್ತಿಯಿಂದ ಮೆಚ್ಚಿಸಬೇಕೆಂಬುದೇ ಅವರ ಉದ್ದೇಶ. ಆದ್ದರಿಂದಲೇ ನಿಮ್ಮನ್ನು ನನ್ನಿಂದ ಬೇರ್ಪಡಿಸಲು ಯತ್ನಿಸುತ್ತಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನಿಮ್ಮನ್ನು ಆಕರ್ಷಿಸಲು ಆಸಕ್ತರಾಗಿದ್ದಾರೆ. ಆದರೆ ಒಳ್ಳೆಯ ಅಭಿಪ್ರಾಯದಿಂದ ಅಲ್ಲ. ನೀವು ಅವರ ವಿಷಯದಲ್ಲಿ ಆಸಕ್ತರಾಗಬೇಕೆಂದು ಅವರು ನಿಮ್ಮನ್ನು ನಮ್ಮಿಂದ ಪ್ರತ್ಯೇಕಿಸುವುದಕ್ಕೆ ಅಪೇಕ್ಷಿಸುತ್ತಾರೆ.