Genesis 11:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇದು ಶೇಮನ ಕುಟುಂಬ ಚರಿತ್ರೆ. ಜಲಪ್ರಳಯದ ಎರಡು ವರ್ಷಗಳ ನಂತರ ಶೇಮನು 100 ವರ್ಷದವನಾಗಿದ್ದಾಗ ಅರ್ಪಕ್ಷದ್ ಎಂಬ ಮಗನನ್ನು ಪಡೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಶೇಮನ ವಂಶವೃಕ್ಷ: ಜಲಪ್ರಳಯವು ಕಳೆದು ಎರಡು ವರ್ಷಗಳಾದ ಮೇಲೆ ಶೇಮನು ನೂರು ವರ್ಷದವನಾಗಿ ಅರ್ಪಕ್ಷದನನ್ನು ಪಡೆದನು.
Kannada BSI Bible 2016
ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಶೇಮನ ವಂಶದವರ ಚರಿತ್ರೆಯು. ಜಲಪ್ರಳಯವು ಕಳೆದು ಎರಡು ವರುಷಗಳಾದ ಮೇಲೆ ಶೇಮನು ನೂರು ವರುಷದವನಾಗಿ ಅರ್ಪಕ್ಷದನನ್ನು ಪಡೆದನು.
Kannada Bible (KNCL) BSI 2016
ಶೇಮನ ವಂಶವೃಕ್ಷ; ಜಲಪ್ರಳಯ ಕಳೆದು ಎರಡು ವರ್ಷಗಳಾದ ಮೇಲೆ ಶೇಮನಿಗೆ ಅರ್ಪಕ್ಷದನು ಹುಟ್ಟಿದನು. ಆಗ ಶೇಮನಿಗೆ 100 ವರ್ಷ ವಯಸ್ಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಶೇಮನ ವಂಶಾವಳಿ: ಶೇಮನು ನೂರು ವರ್ಷದವನಾಗಿದ್ದಾಗ, ಎಂದರೆ, ಪ್ರಳಯವಾಗಿ ಎರಡು ವರ್ಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.