Genesis 16:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು”‘ ಎಂದು ಹೆಸರಿಟ್ಟಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, “ನೀನು ನನ್ನನ್ನು ನೋಡುವ ದೇವರು” ಎಂದು ಹೆಸರಿಟ್ಟಳು: ಏಕೆಂದರೆ, “ ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ” ಎಂದುಕೊಂಡಳು.
Kannada BSI Bible 2016
ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವಳು - ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡಿದ್ದೇನಲ್ಲಾ ಅಂದುಕೊಂಡು ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವ ದೇವರೆಂದು ಹೆಸರಿಟ್ಟಳು.
Kannada Bible (KNCL) BSI 2016
ಹಾಗರಳು, “ನನ್ನನ್ನು ನೋಡುವಾತ ದೇವರನ್ನು ನಾನಿಲ್ಲೇ ನೋಡಿಬಿಟ್ಟೆನಲ್ಲಾ!” ಎಂದುಕೊಂಡು ತನ್ನ ಸಂಗಡ ಮಾತನಾಡಿದ ಸರ್ವೇಶ್ವರ ಸ್ವಾಮಿಗೆ, “ಎಲ್ಲವನ್ನು ನೋಡುವಾತ ದೇವರು\ ಎಂದು ಹೆಸರಿಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವ ದೇವರಿಗೆ, “ನೀವು ನನ್ನನ್ನು ನೋಡುವ ದೇವರು,” ಎಂದು ಹೆಸರಿಟ್ಟಳು. ಏಕೆಂದರೆ, “ನನ್ನನ್ನು ನೋಡುವ ದೇವರನ್ನು ನಾನು ಇಲ್ಲಿ ನೋಡಿದೆ,” ಎಂದುಕೊಂಡಳು.