Genesis 19:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಚೋಗರ್ ಊರಿನಲ್ಲಿ ವಾಸಮಾಡಿಕೊಂಡಿರಲು ಲೋಟನಿಗೆ ಹೆದರಿಕೆಯಾಯಿತು. ಆದ್ದರಿಂದ ಅವನು ಮತ್ತು ಅವನ ಹೆಣ್ಣುಮಕ್ಕಳು ಬೆಟ್ಟಪ್ರದೇಶಕ್ಕೆ ಹೋಗಿ ಗುಹೆಯೊಂದರಲ್ಲಿ ವಾಸಿಸತೊಡಗಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೋಟನು ಚೋಗರಿನಲ್ಲಿರುವುದಕ್ಕೆ ಹೆದರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಮಾಡಿದರು.
Kannada BSI Bible 2016
ಲೋಟನು ಚೋಗರಿನಿಂದ ಏರಿಹೋಗಿ ತನ್ನ ಇಬ್ಬರು ಕುಮಾರ್ತೆಯರ ಸಂಗಡ ಬೆಟ್ಟದಲ್ಲಿ ವಾಸ ಮಾಡಿದನು; ಯಾಕಂದರೆ ಚೋಗರದಲ್ಲಿ ವಾಸಿಸು ವದಕ್ಕೆ ಅವನು ಭಯಪಟ್ಟನು. ಅಲ್ಲಿ ಅವನೂ ಅವನ ಇಬ್ಬರು ಕುಮಾರ್ತೆಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೋಟನು ಚೋಗರಿನಲ್ಲಿರುವದಕ್ಕೆ ಅಂಜಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕರಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಿಸಿದರು.
Kannada Bible (KNCL) BSI 2016
ಲೋಟನು ಚೋಗರಿನಲ್ಲಿ ಮನೆ ಮಾಡುವುದಕ್ಕೆ ಅಂಜಿದನು. ಈ ಕಾರಣ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗುಡ್ಡಗಾಡನ್ನು ಹತ್ತಿ ಅಲ್ಲಿದ್ದ ಒಂದು ಗವಿಯಲ್ಲಿ ವಾಸಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೋಟನು ಚೋಗರಿನಲ್ಲಿ ವಾಸಿಸಲು ಭಯಪಟ್ಟು, ತನ್ನ ಇಬ್ಬರು ಪುತ್ರಿಯರ ಸಂಗಡ ಬೆಟ್ಟದ ಮೇಲೆ ಹೋಗಿ ವಾಸಮಾಡಿದನು. ಅಲ್ಲಿ ಅವನೂ ಅವನ ಇಬ್ಬರು ಪುತ್ರಿಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.