Genesis 19:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಂದು ದಿನ ಹಿರಿಯ ಮಗಳು ತನ್ನ ತಂಗಿಗೆ, “ಭೂಲೋಕದಲ್ಲೆಲ್ಲಾ ಸ್ತ್ರೀಯರೂ ಪುರುಷರೂ ಮದುವೆಯಾಗುತ್ತಾರೆ. ಆದರೆ ಇಲ್ಲಿ ನಾವು ಮದುವೆಯಾಗಲು ಯಾವ ಗಂಡಸರೂ ಇಲ್ಲ. ನಮ್ಮ ತಂದೆಗೂ ವಯಸ್ಸಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ, “ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ;
Kannada BSI Bible 2016
ಆಗ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮಲ್ಲಿ ಬರುವ ಹಾಗೆ ಪುರುಷನು ಭೂಮಿಯಲ್ಲಿ ಯಾರೂ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ - ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ;
Kannada Bible (KNCL) BSI 2016
ಇಂತಿರಲು, ಅವನ ಹಿರಿಯ ಮಗಳು ತನ್ನ ತಂಗಿಗೆ ಹೀಗೆಂದಳು. “ನಮ್ಮ ತಂದೆ ಮುದುಕ; ಲೋಕ ಪದ್ಧತಿಯ ಪ್ರಕಾರ ನಮ್ಮನ್ನು ಮದುವೆ ಮಾಡಿಕೊಳ್ಳುವ ಗಂಡುಗಳು ಇಲ್ಲೆಲ್ಲಿಯೂ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಹಿರಿಯ ಮಗಳು ಚಿಕ್ಕವಳಿಗೆ, “ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮೊಂದಿಗಿರಲು ನಮ್ಮ ಸುತ್ತಲಿನ ಪ್ರದೇಶದಲ್ಲಿ ಪುರುಷರಿಲ್ಲ.