Genesis 20:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಬೀಮೆಲೆಕನು ಅಬ್ರಹಾಮನಿಗೆ, “ಇಗೋ, ಇದು ನನ್ನ ದೇಶ. ನಿನಗೆ ಇಷ್ಟವಾದ ಸ್ಥಳದಲ್ಲಿ ವಾಸಮಾಡು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇಗೋ, ಇದು ನನ್ನ ದೇಶ; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ನೀನು ವಾಸ ಮಾಡಬಹುದು” ಎಂದು ಅಬೀಮೆಲೆಕನು ಹೇಳಿದನು.
Kannada BSI Bible 2016
ಅಬೀಮೆಲೆಕನು--ಇಗೋ, ನನ್ನ ದೇಶವು ನಿನ್ನ ಮುಂದೆ ಇದೆ; ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ ನನ್ನ ದೇಶವು; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ವಾಸಮಾಡಬಹುದು ಅಂದನು.
Kannada Bible (KNCL) BSI 2016
ಅದೂ ಅಲ್ಲದೆ, “ಇಗೋ, ನನ್ನ ನಾಡು ನಿನಗೆ ತೆರೆದಿದೆ; ಇಷ್ಟಬಂದ ಕಡೆ ಹೋಗಿ ವಾಸಮಾಡು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಬೀಮೆಲೆಕನು, “ನನ್ನ ದೇಶವು ನಿನ್ನ ಮುಂದೆ ಇದೆ, ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು,” ಎಂದನು.